ಬಡವರ ಕಲ್ಯಾಣ ಕಾರ್ಯಕ್ರಮ ಪಂಚ ಗ್ಯಾರಂಟಿ: ರಮಾನಾಥ ರೈ
ಯಾರೂ ಈ ಯೋಜನೆಗಳಿಂದ ಹೊರಗುಳಿಯ ಬಾರದು ಎಂದು ನಮ್ಮ ಪ್ರಯತ್ನ: ಜಯಂತಿ ವಿ.ಪೂಜಾರಿ
ವಿಟ್ಲ: ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ಅಧ್ಯಕ್ಷತೆಯಲ್ಲಿ ಕನ್ಯಾನ,ಕರೋಪಾಡಿ, ಪೆರುವಾಯಿ,ಮಾಣಿಲ ಗ್ರಾಮಗಳನ್ನು ಒಳಗೊಂಡು ನೋಂದಾವಣೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಕನ್ಯಾನ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವರಾದ ರಮಾನಾಥ ರೈ ರವರು ಮಾತನಾಡಿ ಬಡವರ ಕಲ್ಯಾಣ ಕಾರ್ಯಕ್ರಮ ಪಂಚ ಗ್ಯಾರಂಟಿ, ಈ ಯೋಜನೆ ಪ್ರತಿ ಬಡವರ ಸ್ವಾಭಿಮಾನದ ಜೀವನದ ಮೆಟ್ಟಿಲು..ಕರ್ನಾಟಕ ರಾಜ್ಯದಲ್ಲಿಯೇ ಬಂಟ್ವಾಳ ತಾಲೂಕಿನಲ್ಲಿ ವಲಯ ಮಟ್ಟದಲ್ಲಿ ಸಮಿತಿಯ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ರವರು ಮಾತನಾಡಿ, ಈ ಕಾರ್ಯಕ್ರಮದ ಪ್ರಯೋಜನ ಪ್ರತಿಯೊಬ್ಬರು ಪಡೆಯಬೇಕು ಯಾರು ಕೂಡ ಈ ಯೋಜನೆಯಿಂದ ಹೊರಗೆ ಉಳಿಯಬಾರದು ಎಂದು ವಲಯ ಮಟ್ಟದಲ್ಲಿ ಈ ಕಾರ್ಯಕ್ರಮ ಅಯೋಜನೆ ಮಾಡಲಾಗಿದೆ ಇದು 6 ನೇ ಕಾರ್ಯಕ್ರಮ ಇನ್ನೂ 4 ಕಾರ್ಯಕ್ರಮ ನಡೆಯಲಿದೆ.ತಾಲೂಕು ಪಂಚ ಗ್ಯಾರಂಟಿ ಅಧಿಕಾರಿಗಳ ಪ್ರಯತ್ನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಕನ್ಯಾನ ಗ್ರಾ.ಪಂ ಅಧ್ಯಕ್ಷರಾದ ರೇಖಾ ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ , ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ದ.ಕ. ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷರಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಮಾಣಿಲ ಗ್ರಾ.ಪಂ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು, ಕರೋಪಾಡಿ ಗ್ರಾ.ಪಂ ಅಧ್ಯಕ್ಷೆ ಸೂರ್ಯಕಾಂತಿ, ಕನ್ಯಾನ ಗ್ರಾ.ಪಂ ಉಪಾಧ್ಯಕ್ಷರಾದ ಅಬ್ದುಲ್ ರಹೀಮಾನ್, ಕರೋಪಾಡಿ ಗ್ರಾ.ಪಂ ಉಪಾಧ್ಯಕ್ಷರಾದ ಅನ್ವರ್ ಕರೋಪಾಡಿ, ಪೆರುವಾಯಿ ಗ್ರಾ.ಪಂ ಅಧ್ಯಕ್ಷೆ ನಫೀಸಾ, ಗ್ಯಾರೆಂಟಿ ಯೋಜನೆಯ ಕನ್ಯಾನ ಗ್ರಾ.ಪಂ ಸದಸ್ಯ ಮಜೀದ್ ಕನ್ಯಾನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮತಿ ಸದಸ್ಯರಾದ ಸತೀಶ್ ಕೆ, ಅಬ್ದುಲ್ ಕರೀಂ,ವಿನಯ್ ಕುಮಾರ್ ಸಿಂಧ್ಯಾ,ಸಿರಾಜ್ ಮದಕ,ಹರ್ಷನ್ ಬಿ,ಮುರಳೀಧರ ವೈ,ಸುದೀಂದ್ರ ಶೆಟ್ಟಿ, ಕರೋಪಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಮೊದಲಾದವರು ಉಪಸ್ಥಿತರಿದ್ದರು. ಕನ್ಯಾನ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಲಕ್ಷಣ್ ಸ್ವಾಗತಿಸಿದರು.ಗ್ರಾ.ಪಂ ಕಾರ್ಯದರ್ಶಿ ಕರೀಂ ಕಾರ್ಯಕ್ರಮ ನಿರೂಪಿಸಿದರು.
ಪಂಚ ಗ್ಯಾರಂಟಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಶಿಬಿರ ಮಾಹಿತಿ ವದಗಿಸಿದರು ಸುಮಾರು 250 ರಿಂದ 300 ಜನ ಇದರ ಪ್ರಯೋಜನ ಪಡೆದುಕೊಂಡರು.