- ನೆಲ್ಯಾಡಿ: ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ 50ವರ್ಷ ದಾಂಪತ್ಯ ಜೀವನ ಪೂರೈಸಿದ ಕಡಬ ತಾಲೂಕು ಕೊಂಬಾರು ಗ್ರಾಮದ ಇಬ್ಬರು ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಉರುಂಬಿ ಬಾಬುಗೌಡರ ಮನೆಯಲ್ಲಿ ಡಿ.1ರಂದು ಸಂಜೆ ನಡೆಯಿತು.
ವಲಯ ಒಕ್ಕೂಟದ ಅಧ್ಯಕ್ಷ ವಸಂತ ಗೌಡ ಬಿಜೇರು ಅಧ್ಯಕ್ಷತೆ ವಹಿಸಿದ್ದರು. ಮಾಗಣೆ ಗೌಡರಾದ ಪುರುಷೋತ್ತಮ ಗೌಡ ಕಾಪಾರು ದೀಪ ಪ್ರಜ್ವಲಿಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ದಂಪತಿಗಳನ್ನು ಸನ್ಮಾನಿಸಿದರು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ ಮನೋಹರ ಗೌಡ, ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣ ಗೌಡ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
೫೦ವರ್ಷ ದಾಂಪತ್ಯ ಜೀವನ ಪೂರ್ಣಗೊಳಿಸಿದ ಮಾದರಿ ದಂಪತಿಗಳಾದ ಚಂದ್ರಶೇಖರ ಗೌಡ-ಕುಸುಮಾವತಿ ಕಟ್ಟೆಮನೆ, ಬಾಬುಗೌಡ-ಚಂದ್ರಮ್ಮ ಊರುಂಬಿರವರನ್ನು ಸನ್ಮಾನಿಸಲಾಯಿತು. ಸಿರಿಬಾಗಿಲು ಒಕ್ಕೂಟದ ಅಧ್ಯಕ್ಷ ಬಾಳಪ್ಪ ಗೌಡ ದೇರಣೆ, ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಗೌಡ ಬೇರಿಕೆ, ಒಕ್ಕಲಿಗ ಗೌಡ ಜಿಲ್ಲಾ ಸಮಿತಿ ಸದಸ್ಯ ಸುಂದರ ಗೌಡ ಅತ್ರಿಜಾಲು, ಕಡಬ ತಾಲೂಕು ಸಮಿತಿ ಉಪಾಧ್ಯಕ್ಷ ರಾಧಾಕೃಷ್ಣ ಗೌಡ ಕೆರ್ನಡ್ಕ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಶಾಖಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ನಾಗೇಶ್ ಗೌಡ ನಳಿಯಾರು, ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ವಲಯ ನಿರ್ದೇಶಕ ರವಿಚಂದ್ರ ಗೌಡ ಹೊಸವಕ್ಲು, ನೆಲ್ಯಾಡಿ ವಲಯ ಮಹಿಳಾ ಘಟಕದ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಗೌಡ, ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಸಲಹಾ ಸಮಿತಿ ಸದಸ್ಯ ಕೃಷ್ಣಪ್ಪ ಗೌಡ ಕೆಂಜಾಳ, ಆನಂದ ಗೌಡ ಕಲ್ಲರ್ತನೆ, ಒಕ್ಕೂಟಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಪರಮೇಶ್ವರ ಗೌಡ ಉರುಂಬಿ ಸ್ವಾಗತಿಸಿದರು. ರಕ್ಷಿತಾ ಕೋಲ್ಪೆ ವಂದಿಸಿದರು. ಮೇಲ್ವಿಚಾರಕ ವಿಜಯಕುಮಾರ್ ನಿರೂಪಿಸಿದರು. ಸಿರಿಬಾಗಿಲು ಗ್ರಾಮ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಸೀತಾರಾಮ ಗೌಡ ಚಿಂತನ ವಾಚಿಸಿದರು. ನಂದಾ ಪಾದೆ, ದೇವಕಿ ಕುಡಾಳ, ಮೋಹಿನಿ ಬಿಜೇರು ಪ್ರಾರ್ಥಿಸಿದರು.