ಸವಣೂರು : ಸವಣೂರು ಗ್ರಾಮದ ಆರೇಲ್ತಡಿ ಉಳ್ಳಾಕುಲು ಮತ್ತು ಕೆಡೆಂಜೊಡಿತ್ತಾಯ ದೈವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಮನವಿ ಪತ್ರ ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಡಿ.14ರಂದು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಅರ್ಚಕ ಪದ್ಮನಾಭ ಕುಂಜತ್ತಾಯ ಅವರು ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕಿನಾರ,ಅಧ್ಯಕ್ಷ ದಿನೇಶ್ ಮೆದು,ಗೌರವ ಸಲಹೆಗಾರರಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು,ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು,ರಾಕೇಶ್ ರೈ ಕೆಡೆಂಜಿ, ತಾರಾನಾಥ ಕಾಯರ್ಗ,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಪಟ್ಟೆ,ಕೋಶಾಧಿಕಾರಿ ರಾಜೇಶ್ ಇಡ್ಯಾಡಿ,ಜತೆ ಕಾರ್ಯದರ್ಶಿ ಜತ್ತಪ್ಪ ಗೌಡ ಆರೇಲ್ತಡಿ,ಉಪಾಧ್ಯಕ್ಷರಾದ ಮೋನಪ್ಪ ಗೌಡ ಆರೇಲ್ತಡಿ,ಹರಿಶ್ಚಂದ್ರ ಕಾಯರ್ಗ,
ಅಜಿತ್ ಕುಮಾರ್ ಶೆಟ್ಟಿ ಮುಗೇರುಗುತ್ತು,ಸದಸ್ಯರಾದ ಸಂಜೀವ ಪೂಜಾರಿ ಅಗರಿಗುತ್ತು,ನಾರಾಯಣ ಗೌಡ ಪೂವ,ಚಂದ್ರಶೇಖರ ಮೆದು,ಈಶ್ವರ ಗೌಡ ಕಾಯರ್ಗ,ವಿಜಯ ಈಶ್ವರ ಕಾಯರ್ಗ,ಮೋಹನ್ ರೈ ಕೆರೆಕ್ಕೋಡಿ,ಸುರೇಶ್ ರೈ ಸೂಡಿಮುಳ್ಳು,ತೀರ್ಥರಾಮ ಕೆಡೆಂಜಿ, ಪ್ರಕಾಶ್ ಕುದ್ಮನಮಜಲು,ದಿವಾಕರ ಬಸ್ತಿ,ಆನಂದ ಕೇಕುಡೆ,ಗಂಗಾಧರ ಪೆರಿಯಡ್ಕ, ಗುಣಪಾಲ ಗೌಡ ಇಡ್ಯಾಡಿ,ರಾಜೇಂದ್ರ ಇಡ್ಯಾಡಿ,ಗಣೇಶ್ ಕೆಡೆಂಜಿ ,ವೀರಪ್ಪ ಗೌಡ ಕುರ್ತಲಾ , ಅಪ್ಪಿ ಮಡಕೆ, ವಿಶ್ವನಾಥ ಪೂಜಾರಿ ಏರ್ತಿಲ ಮೊದಲಾದವರಿದ್ದರು.