ಪುತ್ತೂರು : ನ್ಯೂ ವಿಷಿಯನ್ ಜನರೇಷನ್ ಫ್ರೊಗ್ರಾಮ್ ಕಾರ್ಯಕ್ರಮದಡಿಯಲ್ಲಿ 2.5 NVG ಮಿತ್ರಾ ಸುರತ್ಕಲ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗದವರ ಆಶ್ರಯದಲ್ಲಿ ಉಚಿತವಾಗಿ ಕಣ್ಣಿನ ತಪಾಸಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೇತ್ರ ತಜ್ಞ ಡಾ.ರಾಮಚಂದ್ರ ಮಾಡಿದರು. ಡಾ.ಅಭಿರಾಮ್, ಡಾ.ಪ್ರಜ್ಞಾ, ಡಾ.ರಕ್ಷಿತಾ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ರವಿಚಂದ್ರ ವಹಿಸಿದ್ದರು. ಉಪಾಧ್ಯಕ್ಷೆ ನವ್ಯ , ಎಸ್.ಡಿ.ಎಂ.ಸಿ ಸದಸ್ಯರಾದ ಹರೀಶ್,ಸುರೇಶ್ ಗಂಡಿ, ವಿನುತ, ಚಂದ್ರಾವತಿ,ಭವ್ಯಾ , ಸಂದೀಪ್ ಕಾಂತಿಲ, ರಮೇಶ್ ಗೌಡ ಇವರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿದರು. ಶಿಕ್ಷಕಿ ಶಿಲ್ಪರಾಣಿ ವಂದಿಸಿದರು. ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಹೇಮಾವತಿ, ಮಧುಶ್ರೀ,ಸುಮಿತ್ರಾ, ಸವಿತಾ ಸಂಚನಾ ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ನೂರಾರು ಮಕ್ಕಳು ಊರವರು ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು.