ಪುತ್ತೂರು ಝೋನ್ ಎಸ್‌ವೈಎಸ್ ಹಾಗೂ ಸರ್ಕಲ್ ಟೋಪ್ಸ್ ಸಂಗಮ

0

ಪುತ್ತೂರು: ಕರ್ನಾಟಕ ರಾಜ್ಯ ಎಸ್‌ವೈಎಸ್ ಪುತ್ತೂರು ಝೋನ್ ಸಮಿತಿ ಹಾಗೂ ಝೋನ್ ವ್ಯಾಪ್ತಿಯ ಪುತ್ತೂರು, ಕಬಕ, ಮಾಣಿ, ರೆಂಜ, ಕುಂಬ್ರ, ಮಾಡಾವು, ಈಶ್ವರಮಂಗಲ, ಸರ್ಕಲ್‌ನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಸಾಂತ್ವನ ಕಾರ್ಯದರ್ಶಿ, ಇಸಾಬಾ ಕಾರ್ಯದರ್ಶಿಗಳನ್ನೊಳಗೊಂಡ ಟೋಪ್ಸ್ ಸಂಗಮ ಝೋನ್ ಅಧ್ಯಕ್ಷ ಅಬೂ ಶಝ ಅಬ್ದುಲ್ ರಝಾಕ್ ಅಲ್ ಖಾಸಿಮಿ ಕೂರ್ನಡ್ಕರವರ ಅಧ್ಯಕ್ಷತೆಯಲ್ಲಿ ಪ್ರೆಸ್ಟೀಜ್ ಪೆವಿಲಿಯನ್ ಹಾಲ್‌ನಲ್ಲಿ ನಡೆಯಿತು.


ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು. ಈಸ್ಟ್ ಜಿಲ್ಲಾ ಇಸಾಬಾ ಕಾರ್ಯದರ್ಶಿ ಉಸ್ಮಾನ್ ಸೋಕಿಲರವರು ಇಸಾಬಾ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ಸ್ವಾಲಿಹ್ ಮುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಮೀದ್ ಕೊಯಿಲರವರು ಸಾಂದರ್ಭಿಕವಾಗಿ ಮಾತನಾಡಿದರು.


ಝೋನ್ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ನಾಯಕತ್ವದಲ್ಲಿ ಸರ್ಕಲ್ ಪಿಟಿಸಿ ಕ್ಯಾಂಪ್ ಬಗ್ಗೆ ಅವಲೋಕನ ನಡೆಸಲಾಯಿತು. ಪುತ್ತೂರು ಝೋನ್ ಜಂಇಯತ್ತುಲ್ ಉಲಮಾ ಪ್ರ.ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಅಬ್ದುಲ್ ಅಝೀಝ್ ಮಿಸ್ಬಾಹಿರವರನ್ನು ಝೋನ್ ಎಸ್‌ವೈಎಸ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಸಂಗಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಝೀಝ್ ಚೆನ್ನಾರ್, ಝೋನ್ ಕೋಶಾಧಿಕಾರಿ ಅಬೂಬಕರ್ ನರಿಮೊಗರು, ನೌಷಾದ್ ಸಅದಿ ಗಟ್ಟಮನೆ, ಶಮೀರ್ ಸಖಾಫಿ ರೆಂಜಲಾಡಿ, ಝೋನ್ ಇಸಾಬಾ ಕಾರ್ಯದರ್ಶಿ ರಝಾಕ್ ಹಿಮಮಿ ರೆಂಜ, ಝೋನ್ ದಅವಾ ಕಾರ್ಯದರ್ಶಿ ಹೈದರ್ ಸಖಾಫಿ ಬುಡೋಳಿ, ಅಬ್ದುಲ್ಲ ಕಾವು, ಸಾಂತ್ವನ ಕಾರ್ಯದರ್ಶಿ ಫವಾಝ್ ಕಟ್ಟತ್ತಾರು, ಮುನೀರ್ ಹನೀಫಿ ಅರಿಕ್ಕಿಲ, ಇರ್ಫಾನ್ ಹಿಮಮಿ, ಖಾಸಿಮ್ ಪೇರಲ್ತಡ್ಕ, ಕೆ.ಪಿ ಉಮ್ಮರ್ ನರಿಮೊಗರು, ಶಾಹುಲ್ ಹಮೀದ್ ಕಬಕ, ಶಮೀರ್ ಕೊಡಿಪ್ಪಾಡಿ, ಜಲೀಲ್ ಮುಸ್ಲಿಯಾರ್ ಕೋಡಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here