ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ 

0

ಬಡಗನ್ನೂರು:  ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟವು ಡಿ. 14ರಂದು ಸರ್ವೋದಯ ಕ್ರೀಡಾಂಗಣದಲ್ಲಿ ನಡೆಯಿತು .

 ಹಿರಿಯ ವಿದ್ಯಾರ್ಥಿ, ಉದ್ಯಮಿ ಸತ್ಯಾನಂದ ನಿಡಿಯಡ್ಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾಡಿದರು.ವಿದ್ಯಾ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಭಟ್ ಪಾದೆಗದ್ದೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್‍ ಡಿ ಶಿವರಾಮ್ ಮಾತನಾಡಿದರು.ಉದ್ಯಮಿ ಸಲಾವುದ್ದೀನ್ ಪದಡ್ಕ ಧ್ವಜಾರೋಹಣ ನೆರವೇರಿಸಿದರು.

ಹಿರಿಯ ವಿದ್ಯಾರ್ಥಿ ಸಮಿತ್ ರಾಜ್ ರೈ, ಬೋಳಂಕೂಡ್ಲು, ದುಬೈ  ಕ್ರೀಡಾ ಜ್ಯೋತಿ ಬೆಳಗಿಸಿ ಶುಭ ಹಾರೈಸಿದರು. ಶಾಲಾ ಕಾರ್ಯ ಚಟುವಟಿಕೆಗಳಿಗೆ ನಿರಂತರ ಸಹಕರಿಸುತ್ತಿರುವ ಹಿರಿಯ ವಿದ್ಯಾರ್ಥಿ, ಉದ್ಯಮಿ ಸತ್ಯಾನಂದ ನಿಡಿಯಡ್ಕ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಶಾಲಾ ಸಂಚಾಲಕ ಮಹಾದೇವ ಭಟ್ಟ ಕೊಲ್ಯ,ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಮರದ ಮೂಲೆ ಉಪಸ್ಥಿತರಿದ್ದರು.

 ಸರ್ವೋದಯ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಸುಖೇಶ್ ರೈ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಪ್ರಶಾಂತಿ ರೈ ಕಾರ್ಯಕ್ರಮ ನಿರ್ವಹಿಸಿದರು.ವಿದ್ಯಾರ್ಥಿನಿ ಸಾರಿಕಾ ರೈ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಂದ ಪಥಸಂಚಲನ ಕವಾಯತು ನಡೆಯಿತು.

LEAVE A REPLY

Please enter your comment!
Please enter your name here