ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಮುನೀರ್ ಮತ್ತು ಉಪಾಧ್ಯಕ್ಷರಾಗಿ ನಮಿತಾ ಆಯ್ಕೆಯಾಗಿದ್ದಾರೆ.
ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಮತ್ತು ಸದಸ್ಯ ವಿಜಯ ಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು.
ಮುಖ್ಯಗುರು ಜೆಸಿಂತಾ ಆನ್ಸಿ ಮಿನೇಜಸ್ ಅವರು ಎಸ್.ಡಿ.ಎಂ.ಸಿ. ರಚನೆಯ ಮಾಹಿತಿ ನೀಡಿ ಆಯ್ಕೆ ಪ್ರಕ್ರಿಯೆ ನಡೆಸಿದರು.
ಸದಸ್ಯರಾಗಿ ಮುನೀರ್, ನಮಿತಾ, ರಮೇಶ್, ಷೆರೀಫಾ, ಅಸ್ಮಾ, ವಸಂತಿ, ಉಷಾ, ಸೀತಾ, ಮೀನಾಕ್ಷಿ, ರೇಖಾ, ಚಂದ್ರಲೇಖ, ಆಶಾಲತಾ, ಹೊನ್ನಮ್ಮ, ಸಾಜಿದಾ, ಮರಿಯಮ್ಮ,ಜುನೈದಾ, ಸಲೀಂ ಮತ್ತು ಹಸೀನಾ ಅವರನ್ನು ಆಯ್ಕೆ ಮಾಡಿದ ಬಳಿಕ ಅಧ್ಯಕ್ಷರಾಗಿ ಮುನೀರ್ ಹಾಗೂ ಉಪಾಧ್ಯಕ್ಷರಾಗಿ ನಮಿತಾ ಅವರನ್ನು ಆಯ್ಕೆ ಮಾಡಲಾಯಿತು. ಶಾಲಾ ಶಿಕ್ಷಕ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು.