ಉಡುಪಿ – ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ವಿಚಾರ- ಸಂತ್ರಸ್ತ ರೈತರಿಂದ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ

0

ವಿಟ್ಲ: ಉಡುಪಿ – ಕಾಸರಗೋಡು 400ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ವಿಚಾರದಲ್ಲಿ ರೈತ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿರುವವರ ಮನಪರಿವರ್ತನೆ ಆಗಬೇಕೆಂದು ಆಗ್ತಹಿಸಿ ಸಂತ್ರಸ್ತ ರೈತರಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ ಶೋಕಮಾತಾ ಇಗರ್ಜಿ, ಕಂಬಳಬೆಟ್ಟು ಹಜರತ್ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ಅರ್ಚಕರಾದ ಕೃಷ್ಣ ಪ್ರಸಾದ್ ಬನ್ನಿಂತಾಯ, ಧರ್ಮಗುರುಗಳಾದ ಐವನ್ ಮೈಕಲ್ ರೋಡ್ರಿಗಸ್, ಅಬೂಬ್ಬಕರ್ ನೇತೃತ್ವದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರೈತ ಸಂಘದ ಗೌರವ ಸಲಹೆಗಾರ ಮುರುವ ಮಹಾಬಲ ಭಟ್ , ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ, ಪ್ರಮುಖರಾದ ರಾಬರ್ಟ್ ಮಂಗಿಲಪದವು, ಶ್ರೀನಿವಾಸ ಮರಡಿತ್ತಾಯ ವನಭೋಜನ, ರಾಜೀವ ಗೌಡ ಬೋಳಿಗದ್ದೆ, ಶಹೀಲ್ ಮಂಗಳಪದವು, ಚಿತ್ತರಂಜನ್ ಎನ್ ಎಸ್ ಡಿ, ರೋಹಿತಾಶ್ವ ಭಂಗ, ಅಣ್ಣು ಗೌಡ, ಆನಂದ ಗೌಡ, ತಿಮ್ಮಪ್ಪ ಪೂಜಾರಿ, ಕೃಷ್ಣ ಪ್ರಸಾದ್, ಲಕ್ಷ್ಮೀನಾರಾಯಣ, ರಾಜೀವ ಕಾಯರ್ಮಾರು, ರವಿ ಕೊಳಂಬೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here