ಕೈಕಾರ: ಗ್ರಾಮಾಭಿವೃದ್ದಿ ಯೋಜನೆಯ ಜನನಿ ಜ್ಞಾನ ವಿಕಾಸ ಸಭೆ, ಲಾಭಾಂಶ ವಿತರಣೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಟ್ಟಂಪಾಡಿ ವಲಯದ ಅಜ್ಜಿ ಕಲ್ಲು ಕಾರ್ಯಕ್ಷೇತ್ರದ ಜನನಿ ಜ್ಞಾನವಿಕಾಸ ಸಭೆಯು ಕೈಕಾರ ಶಾಲೆಯಲ್ಲಿ ಪುಷ್ಪಾವತಿಯವರ ಅಧ್ಯಕ್ಷತೆಯಲ್ಲಿ ದ.15 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮಹಿಳೆಯರ ದುಂದುವೆಚ್ಚ ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಸಿಶೇ ಕಜೆಮಾರ್ ಮಾಹಿತಿ ನೀಡಿ, ಮಹಿಳೆಯರು ಸಮಯವನ್ನು ವ್ಯರ್ಥ ಮಾಡದೆ ತಮ್ಮ ದುಡಿಮೆಯ ಒಂದಂಶವನ್ನು ಕೂಡಿಟ್ಟು ಮಕ್ಕಳ ಭವಿಷ್ಯಕ್ಕೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು, ಹುಟ್ಟುಹಬ್ಬ, ಮದುವೆ ಇತ್ಯಾದಿ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡು, ಆ ನೆನಪಿಗಾಗಿ ಆಭರಣಗಳನ್ನು ಖರೀದಿ ಮಾಡಿಟ್ಟುಕೊಂಡರೆ ಕಷ್ಟದ ಸಮಯದಲ್ಲಿ ಅದು ಸಹಾಯವಾಗುತ್ತದೆ ಎಂದ ಅವರು ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರಿಂದ ಒಳ್ಳೆಯ ಜೀವನವನ್ನು ನಡೆಸಲು ಸಾಧ್ಯವಿದೆ ಎಂದು ಹೇಳಿದರು.


ಜ್ಞಾನ ವಿಕಾಸದ ತಾಲೂಕು ಸಮನ್ವಯಾಧಿಕಾರಿ ಕಾವ್ಯರವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೊರೆತ ಲಾಭಾಂಶವನ್ನು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುವಂತೆ ತಿಳಿಸಿ, ಮಹಿಳೆಯರಿಗೆ ಸಂಘದ ಬಗ್ಗೆ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಿದರು.


ಈ ಸಂದರ್ಭದಲ್ಲಿ ಜ್ಞಾನ ವಿಕಾಸದ ಸಂಘಗಳಾದ ಶಿವಾನಿ, ಧರ್ಮದೈವ, ಶ್ರೀ ತುಳಸಿ ಸಂಘಗಳಿಗೆ ಲಾಭಾಂಶದ ವಿತರಣೆಯನ್ನು ಮಾಡಲಾಯಿತು. ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಸಹಕರಿಸಿದರು. ಚಂದ್ರಾವತಿ ಸ್ವಾಗತಿಸಿ, ಧರ್ಮಾವತಿ ವಂದಿಸಿದರು. ವಿಮಲಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here