ಪುತ್ತೂರು: ಹೋಲಿ ರಿಡೀಮರ್ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಮಜಲು ಇಲ್ಲಿನ 7ನೆ ತರಗತಿಯ ವಿದ್ಯಾರ್ಥಿನಿ ಲಾವಣ್ಯ ಡಿ ನಾಯಕ್ ಹಿರಿಯರ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಇವರು ಕಕ್ವೆ ನಿವಾಸಿ ದಯಾನಂದ ನಾಯಕ್ ಹಾಗೂ ವಿಜಯ ಡಿ ನಾಯಕ್ ರವರ ಪುತ್ರಿ. ಇವರಿಗೆ ಶಾಲಾ ಶಿಕ್ಷಕರುಗಳಾದ ಸುಧಾ ಸಂದೇಶ್ ಹಾಗೂ ಸರಿತಾ ನಾಯ್ಕ ಇವರು ಮಾರ್ಗದರ್ಶನ ನೀಡಿರುತ್ತಾರೆ.