ಪುತ್ತೂರು: ಪುತ್ತೂರಿನಲ್ಲಿ ಡಿ.17ರಂದು ನಡೆದ 15ರ ವಯೋಮಿತಿಯ ಮುಕ್ತ ಕರಾಟೆ ಪಂದ್ಯಾಟದಲ್ಲಿ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿ ಸಹೋದರರಾದ ಕ್ಲಿಪ್ಸನ್ ಮೊರಾಸ್ ರವರು ಕುಮಿಟೆ ಹಾಗೂ ಕಟಾದಲ್ಲಿ ಪ್ರಥಮ, 13ರ ವಯೋಮಿತಿಯಲ್ಲಿ ಮೆಲ್ಸನ್ ಮೊರಾಸ್ ರವರು ಕುಮಿಟೆಯಲ್ಲಿ ದ್ವಿತೀಯ, ಕಟಾದಲ್ಲಿ ತೃತೀಯ ಸ್ಥಾನವನ್ನು, 15ರ ವಯೋಮಿತಿಯಲ್ಲಿ ಮನ್ವಿತ್ ಜೇಸನ್ ನೊರೋನ್ಹಾರವರು ಕುಮಿಟೆ ಹಾಗೂ ಕಟಾದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಕ್ಲಿಪ್ಸನ್ ಹಾಗೂ ಮೆಲ್ಸನ್ ಸಹೋದರರು ಅಳಕೆಮಜಲು ನಿವಾಸಿ ದಿ.ಕ್ಲಿಫರ್ಡ್ ಮೊರಾಸ್ ಹಾಗೂ ಪ್ರಮೀಳಾರವರ ಪುತ್ರರು. ಮನ್ವಿತ್ ನೊರೋನ್ಹಾರವರು ರಾಗಿದಕುಮೇರು ನಿವಾಸಿ ಮ್ಯಾನ್ವೆಲ್ ನೊರೋನ್ಹಾ ಹಾಗೂ ಜಾನೆಟ್ ಲೋಫೆಸ್ ರವರ ಪುತ್ರ. ಇವರಿಗೆ ಸೆನ್ಸಾಯಿ ಮಾಧವ ಅಳಿಕೆ, ರೋಹಿತ್ ಎಸ್.ಎನ್, ನಿಖಿಲ್ ಕೆ.ಟಿರವರು ತರಬೇತಿಯನ್ನು ನೀಡಿರುತ್ತಾರೆ.