puttur: ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವದ ಪ್ರಯುಕ್ತ ಡಿ.19ರಂದು ರಾತ್ರಿ 9.30 ಕ್ಕೆ ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ “ನಾಗ ಮಾಣಿಕ್ಯ” ತುಳು ಚಾರಿತ್ರಿಕ ಪೌರಾಣಿಕ ನಾಟಕ ಮೂಡಿ ಬರಲಿದೆ.
ಬಾಲಕೃಷ್ಣ ಪೂಜಾರಿ ನಿರಾಲ, ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ಈ ವರ್ಷದ ನೂತನ ಕಲಾಕಾಣಿಕೆ “ನಾಗ ಮಾಣಿಕ್ಯ”ಚಾರಿತ್ರಿಕ ತುಳು ನಾಟಕವು ಪ್ರಥಮ ಪ್ರದರ್ಶನದಲ್ಲಿ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಕಲಾಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ. ವಿನೂತನ ಶೈಲಿಯ ಅದ್ದೂರಿ ರಂಗವಿನ್ಯಾಸ ಅನೇಕ ವಿಶೇಷತೆಗಳ ಜೊತೆಗೆ ಸಂಪೂರ್ಣ ಧ್ವನಿ ಮುದ್ರಿತ ನಾಟಕವು ಮೂಡಿ ಬರಲಿದೆ.ಕಲಾಭಿಮಾನಿಗಳನ್ನು ನಾಟಕದ ಆರಂಭದಿಂದ ಕೊನೆಯವರೆಗೂ ಮೂಕ ವಿಸ್ಮಿತ ರಾಗಿ ಬೆರಗುಗೊಳಿಸುವ ರಂಗವಿನ್ಯಾಸ , ಕಥಾ ಹಂದರ ಈ ನಾಟಕದ ಯಶಸ್ವಿಗೆ ಕಾರಣವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಯಾಪದ ಕಲಾವಿದೆರ್ ಉಬಾರ್ ತಂಡದ ಹೊಸ ಪ್ರಯತ್ನ ತುಳು ರಂಗಭೂಮಿಯಲ್ಲಿ ನೂತನ ಸಂಚಲನವನ್ನು ಮೂಡಿಸಿ ಹಲವಾರು ಪ್ರದರ್ಶನಗಳತ್ತ ಮುಂದಡಿ ಇಟ್ಟಿದೆ.
ತುಳುನಾಡ ಕಲಾತಪಸ್ವಿ ಶ್ರೀ ರವಿಶಂಕರ ಶಾಸ್ತ್ರೀ ಪುಣಚ ಇವರ ಪರಿಕಲ್ಪನೆಯಲ್ಲಿ ಮೂಡಿ ಬಂದ ಚಾರಿತ್ರಿಕ ತುಳುನಾಟಕ “ನಾಗ ಮಾಣಿಕ್ಯ” ವನ್ನು ರಚಿಸಿ ನಿರ್ದೇಶನವನ್ನು ಮಾಡಿ ಅಭಿನಯಿಸಿ ಕಲಾಭಿಮಾನಿಗಳು ಬೆರಗುಗೊಳಿಸುವಂತೆ ಮಾಡಿದ್ದಾರೆ.
ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ , ಉದಯ್ ಆರ್. ಪುತ್ತೂರು ಇವರ ಸಾಹಿತ್ಯ , ಸಂಧ್ಯಾ ಶ್ರೀ ಹಿರೇಬಂಡಾಡಿ ಇವರ ನೃತ್ಯ ಸಂಯೋಜನೆ, ರಾಜೇಶ್ ಶಾಂತಿನಗರ ಇವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ , ಲಿತು ಸೌಂಡ್ಸ್ ಮತ್ತು ಲೈಟ್ಸ್, ಇದರ ಕೃಷ್ಣ ಮುಂಡ್ಯ, ಸಿದ್ದು ಬೆದ್ರ ಇವರ ಕೈ ಚಳಕ , ಪ್ರದೀಪ್ ಕಾವು ಮತ್ತು ನವ್ಯಾ ರಾಜ್ ಕಲ್ಲಡ್ಕ ಇವರ ಮುಖ ವರ್ಣಿಕೆಯೊಂದಿಗೆ ಪ್ರದರ್ಶನಗೊಳ್ಳಲಿದೆ.
ಕಲಾವಿದರಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸುರ್ಯ , ಸತೀಶ್ ಶೆಟ್ಟಿ ಹೆನ್ನಾಳ, ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಕುಮಾರಿ ಅನುಷಾ ಜೋಗಿ ಪುರುಷರ ಕಟ್ಟೆ, ಸಂಧ್ಯಾ ಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್.ಪುತ್ತೂರು, ಅನೀಶ್ ಉಬಾರ್ , ಎ. ಎನ್.ಕೊಳoಬೆ ರಾಮಕುಂಜ, ಭರತ್ ಕುಮಾರ್ ಶಾಂತಿನಗರ, ಲಿತಿನ್ ಶಾಂತಿ ನಗರ, ಹರ್ಷ ಶಾಂತಿ ನಗರ, ಹೃತೀಕಾ ಕೆ ಬೆಳ್ಳಿಪ್ಪಾಡಿ, ವಿಲಾಸಿನಿ ಶಾಂತಿನಗರ , ಮನ್ವಿತ್ ಬೆಳ್ಳಿಪ್ಪಾಡಿ,ಬಿ. ಪ್ರಣಿ ತ. ಶಾಂತಿ ನಗರ, ಇವರ ಅಭಿನಯದಲ್ಲಿ ನಾಟಕವು ಮೂಡಿ ಬರಲಿದೆ.
ನಾಟಕ ಪ್ರದರ್ಶನದ ಬುಕಿಂಗ್ ಗೆ 9902543273,8073641071,9008136330,9980389016 ಈ ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.