ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ 2024ರಿಂದ 3ವರ್ಷಗಳ ಅವಽಗೆ 9ಮಂದಿ ಸದಸ್ಯರನ್ನೊಳಗೊಂಡ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲಾಗಿದೆ.ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆಯ ಅಂತಿಮ ಪಟ್ಟಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು ಇಲ್ಲಿಂದ ಆಯಾ ಇಲಾಖೆಗೆ ಕಳುಹಿಸಿದೆ.
ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಡ್ನೂರು ಗ್ರಾಮದ ಪಂಜಿಗುಡ್ಡೆ ಈಶ್ವರ ಭಟ್, ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ ಸಾಮೆತ್ತಡ್ಕ ‘ಜನನಿ’ ನಿವಾಸಿ ನಳಿನಿ ಪಿ ಶೆಟ್ಟಿ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಮುರ ಗೌಡ ಸಮುದಾಯ ಭವನದ ಬಳಿಯ ದಿನೇಶ್ ಪಿ.ವಿ ಕುಲಾಲ್, ನಿವೃತ್ತ ಸರಕಾರಿ ಅಭಿಯೋಜಕಿ ನೆಹರುನಗರ ಧೂಮಾವತಿ ರಸ್ತೆ ಬಳಿಯ ನಿವಾಸಿ ಕೃಷ್ಣವೇಣಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಘಟಕದ ಮಾಜಿ ಅಧ್ಯಕ್ಷ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ಮಹಾಬಲ ರೈ, ನಿವೃತ್ತ ಬ್ಯಾಂಕ್ ಉದ್ಯೋಗಿ ಸಾಮೆತ್ತಡ್ಕ ನಿವಾಸಿ ಬಿ.ಈಶ್ವರ ನಾಯ್ಕ ಬೆಡೇಕರ್, ಜೆಸಿಬಿ ಉದ್ಯಮಿಯಾಗಿರುವ ನರಿಮೊಗರು ಗ್ರಾಮದ ಮುಗೇರಡ್ಕ ನಿವಾಸಿ ವಿನಯ ಕುಮಾರ್, ಪ್ರಗತಿಪರ ಕೃಷಿಕ ಕಲ್ಲಿಮಾರು ಆಳ್ವಾಸ್ ಕಂಪೌಂಡ್ ನಿವಾಸಿ ಸುಭಾಷ್ ರೈ ಬೆಳ್ಳಿಪ್ಪಾಡಿ ಮತ್ತು ದೇವಳದ ಪ್ರಧಾನ ಅರ್ಚಕರೊಬ್ಬರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ.
ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು ಆಸಕ್ತ ಭಕ್ತಾದಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ನಿಗದಿತ ಅವಽಯೊಳಗೆ 39ಅರ್ಜಿಗಳು ಸ್ವೀಕೃತಗೊಂಡಿತ್ತು.ಈ ಪೈಕಿ ಓರ್ವ ಅರ್ಚಕರು ಸೇರಿದಂತೆ ಇದೀಗ 9 ಮಂದಿಯ ವ್ಯವಸ್ಥಾಪನಾ ಸಮಿತಿ ರಚಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆ 2011ರ ಸೆಕ್ಷನ್ 25ರ ಅನ್ವಯ ಆದೇಶ ಹೊರಡಿಸಿದೆ.ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಕಿರು ಪರಿಚಯ ಇಲ್ಲಿ ನೀಡಲಾಗಿದೆ.
ಪಂಜಿಗುಡ್ಡೆ ಈಶ್ವರ ಭಟ್: ಪ್ರಗತಿಪರ ಕೃಷಿಕರಾಗಿದ್ದ ದಿ.ಕೇಶವ ಭಟ್ ಮತ್ತು ಕಮಲ ದಂಪತಿ ಪುತ್ರ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಪಂಜಿಗುಡ್ಡೆ ಈಶ್ವರ ಭಟ್ ಅವರೂ ಪ್ರಗತಿಪರ ಕೃಷಿಕರಾಗಿದ್ದಾರೆ.ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಸುಮಾರು ೧೫ ವರ್ಷಗಳಿಂದ ನಿರ್ದೇಶಕರಾಗಿದ್ದು ಪ್ರಸ್ತುತ ಅಧ್ಯಕ್ಷರಾಗಿರುವ ಇವರು ಬನ್ನೂರು ಗ್ರಾ.ಪಂ ಮಾಜಿ ಸದಸ್ಯರೂ ಆಗಿದ್ದಾರೆ.ಪಡ್ನೂರಿನಲ್ಲಿ ವಾಸ್ತವ್ಯವಿರುವ ಇವರು ಪಡ್ನೂರು ಯರ್ಮುಂಜಪಲ್ಲ ಶ್ರೀ ಅಶ್ವತ್ಥಕಟ್ಟೆ ದೇವತಾ ಸಮಿತಿ ಗೌರವಾಧ್ಯಕ್ಷರಾಗಿ, ಕಡವ ಶೀರಾಡಿ ದೈವಸ್ಥಾನದ ಸಮಿತಿ ಅಧ್ಯಕ್ಷರಾಗಿ, ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿ ಖಜಾಂಚಿಯಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆ,ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.ಇವರ ಪತ್ನಿ ಜಯಶ್ರೀಯವರು ಗೃಹಿಣಿಯಾಗಿದ್ದಾರೆ.ಇವರ ಓರ್ವ ಪುತ್ರ ತರುಣ್ ಸಿ.ಎ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇನ್ನೋರ್ವ ಪುತ್ರ ಶರಣ್ ಮಂಗಳೂರು ಡೆನ್ಮಾರ್ಕ್ ಕಂಪೆನಿಯಲ್ಲಿ ಕಂಪ್ಯೂಟರ್ ಉದ್ಯೋಗಿಯಾಗಿದ್ದಾರೆ.ಇವರ ಸಹೋದರ ಚಂದ್ರಶೇಖರ್ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ನಳಿನಿ ಪಿ ಶೆಟ್ಟಿ: ಡ್ಯಾಶ್ ಮಾರ್ಕೆಟಿಂಗ್ನ ಮಾಲಕರಾಗಿದ್ದ ದಿ|ಪುಷ್ಪರಾಜ್ ಶೆಟ್ಟಿಯವರ ಪತ್ನಿ,ಪ್ರಸ್ತುತ ಡ್ಯಾಶ್ ಮಾರ್ಕೆಟಿಂಗ್ನ ದ.ಕ.ಆಡಳಿತ ನಿರ್ದೇಶಕರಾಗಿರುವ ನಳಿನಿ ಪಿ.ಶೆಟ್ಟಿಯವರು ಶಾಸಕ ಅಶೋಕ್ ಕುಮಾರ್ ರೈ ಅವರ ಸಹೋದರಿ.ಸಾಮೆತ್ತಡ್ಕ ಶಾಲಾ ಎಸ್ಡಿಎಂಸಿ ಅಭಿವೃದ್ಧಿ ಸಮಿತಿ ಟ್ರಸ್ಟಿಯಾಗಿರುವ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಅವರ ಪುತ್ರ ನಿಹಾಲ್ ಪಿ ಶೆಟ್ಟಿಯವರು ಉದ್ಯಮಿಯಾಗಿದ್ದು,ಪುಡಾ ಸದಸ್ಯರಾಗಿದ್ದಾರೆ.ಪುತ್ರಿ ನಮೃತಾ ಪಿ ಶೆಟ್ಟಿಯವರು ಇಂಜಿನಿಯರಿಂಗ್ ಮುಗಿಸಿ ಕಾವೂರು ಗ್ರೂಪ್ ಆ- ಕಂಪೆನಿಯ ಮಾಲಕ ಪ್ರೀತಂ ಶೆಟ್ಟಿಯವರನ್ನು ವಿವಾಹವಾಗಿದ್ದಾರೆ.
ಕೃಷ್ಣವೇಣಿ:ನೆಹರುನಗರ ಧೂಮಾವತಿ ರಸ್ತೆ ಬಳಿಯ ನಿವಾಸಿ ವಿಶ್ವನಾಥ ನಾಕ್ ಅವರ ಪತ್ನಿ ಕೃಷ್ಣವೇಣಿ ಅವರು ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು.ಇವರ ಪುತ್ರಿ ಪೂಜಾ ಅವರಿಗೆ ವಿವಾಹವಾಗಿದ್ದು, ಅಳಿಯ ಅನೀಶ್ ನಾಕ್.
ದಿನೇಶ್ ಪಿ.ವಿ: ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿರುವ ದಿನೇಶ್ ಪಿ.ವಿ.ರವರು ಕಿಲ್ಲೆ ಮೈದಾನ ದೇವತಾ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.ಅಕ್ರಮ ಸಮಿತಿ ಸದಸ್ಯರಾಗಿ,ಭೂ ನ್ಯಾಯ ಮಂಡಳಿ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.ಇವರ ಪತ್ನಿ ತ್ರಿವೇಣಿ ಅವರು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಲ್ಲಿ ಮೆನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಪತ್ನಿ, ಪುತ್ರಿ ಚೈತ್ರ ಮತ್ತು ಪುತ್ರ ಶ್ರೇಯಸ್ ಅವರೊಂದಿಗೆ ಮುರದಲ್ಲಿ ಸುಖೀ ಸಂಸಾರ ನಡೆಸುತ್ತಿದ್ದಾರೆ.
ಮಹಾಬಲ ರೈ ವಳತ್ತಡ್ಕ: ಪ್ರಗತಿಪರ ಕೃಷಿಕರಾಗಿರುವ ಆರ್ಯಾಪು ಗ್ರಾಮದ ವಳತ್ತಡ್ಕ ಮಹಾಬಲ ರೈ ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಘಟಕದ ಮಾಜಿ ಅಧ್ಯಕ್ಷ.ಈ ಹಿಂದೆ ಇವರು ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ,ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ, ಆರ್ಯಾಪು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ,ಕುಂಜೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮಂಡಲ ಪಂಚಾಯತ್ನಿಂದ ಬಳಿಕ ಸತತ ನಾಲ್ಕು ಅವಽಗೆ ಗ್ರಾ.ಪಂ ಸದಸ್ಯರಾಗಿ ಆಯ್ಕೆಗೊಂಡಿದ್ದರು.ಇವರ ಪತ್ನಿ ಸೀತಾ ಎಂ ರೈ ಗೃಹಿಣಿ,ಪುತ್ರ ಸನತ್ ರೈ ಇಂಜಿನಿಯರ್ ಆಗಿದ್ದಾರೆ.ಇನ್ನೋರ್ವ ಪುತ್ರ ಡಾ.ಸಾಕ್ಷತ್ ರೈ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಸೊಸೆ ಆಶ್ರಿತಾ ಸನತ್ ರೈ ಪುತ್ತೂರು ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉದ್ಯಮಿ ವಿನಯ ಕುಮಾರ್: ನರಿಮೊಗರು ಗ್ರಾಮದ ಮುಗೇರಡ್ಕ ನಿವಾಸಿಯಾಗಿರುವ ವಿನಯ ಕುಮಾರ್ ಅವರು ಜೆಸಿಬಿ ಉದ್ಯಮಿಯಾಗಿದ್ದು, ಹಲವಾರು ಧಾರ್ಮಿಕ ಕ್ಷೇತ್ರಗಳಲ್ಲಿ ಜೆಸಿಬಿಯ ಉಚಿತ ಸೇವೆ ನೀಡಿದ್ದಾರೆ. ಮುಗೇರಡ್ಕ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಸಮಿತಿ ಸದಸ್ಯರಾಗಿ, ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದಲ್ಲಿಯೂ ಸೇವೆ ನೀಡಿರುವ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಇವರ ಪತ್ನಿ ಸೀತಾ ಗೃಹಿಣಿಯಾಗಿದ್ದು, ಪುತ್ರ ನಿಕಿತ್ ಕುಮಾರ್, ಪುತ್ರಿ ಮಾನ್ವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈಶ್ವರ್ ಬೆಡೇಕರ್: ಕಾರ್ಪೊರೇಶನ್ ಬ್ಯಾಂಕ್ನ ನಿವೃತ್ತ ಅಽಕಾರಿಯಾಗಿರುವ ಈಶ್ವರ ಬೆಡೇಕರ್ ಅವರು ಪುತ್ತೂರು ರೋಟರಿ ಕ್ಲಬ್ ಸದಸ್ಯರಾಗಿದ್ದಾರೆ.ಮರಾಟಿ ಸಮಾಜ ಸೇವಾ ಸಂಘದ ಪದಾಽಕಾರಿಯಾಗಿದ್ದು, ಸುದಾನ ಸ್ಪೋರ್ಟ್ಸ್ ಕ್ಲಬ್ನ ಕಾರ್ಯದರ್ಶಿಯಾಗಿದ್ದಾರೆ.ಸತ್ಯಾವತಿ ಇವರ ಪತ್ನಿಯಾಗಿದ್ದು, ಪುತ್ರಿ ಸೌಪರ್ಣಿಕ ಅವರು ಇಂಜಿನಿಯರ್ ಅಗಿದ್ದಾರೆ.ಪುತ್ರ ಸಾತ್ವಿಕ್ ಬೆಡೇಕರ್ ಅವರು ಕೊಯಮುತ್ತೂರಿನಲ್ಲಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಸುಭಾಷ್ ರೈ ಬೆಳ್ಳಿಪ್ಪಾಡಿ: ಪ್ರಗತಿಪರ ಕೃಷಿಕರು ಮತ್ತು ಚಿನ್ನ,ಬೆಳ್ಳಿ ವ್ಯಾಪಾರಸ್ಥರಾಗಿರುವ ಸುಭಾಷ್ ರೈ ಬೆಳ್ಳಿಪ್ಪಾಡಿ ಅವರು ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷರಾಗಿ, ಬಡಗನ್ನೂರು ವನಶಾಸ್ತಾರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.ರೋಟರಿ ಕ್ಲಬ್ ಸ್ವರ್ಣದ ಮತ್ತು ಸಮರ್ಪಣಾ ಮಹಿಳಾ ವೇದಿಕೆಯ ನೇತೃತ್ವದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜಾ ಸಮಿತಿ ಸದಸ್ಯರಾಗಿದ್ದಾರೆ.ಇವರ ಪತ್ನಿ ಮಲ್ಲಿಕಾ ರೈ ಗೃಹಿಣಿಯಾಗಿದ್ದಾರೆ.ಆರ್ಕಿಟೆಕ್ಟ್ ಆಗಿರುವ ಪುತ್ರಿ ನಿಶಾನಿ, ಮಂಗಳೂರು ಸಹ್ಯಾದ್ರಿಯಲ್ಲಿ ಕಂಪ್ಯೂಟರ್ ಸಯನ್ಸ್ ಕಲಿಯುತ್ತಿರುವ ಪುತ್ರ ನಿರೋಶ್ ರೈ ಅವರೊಂದಿಗೆ ಕಲ್ಲಿಮಾರ್ ಎಂಬಲ್ಲಿ ಸುಖೀಸಂಸಾರ ನಡಸುತ್ತಿದ್ದಾರೆ.