ಪುತ್ತೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕೌಡಿಚ್ಚಾರು ಇದರ ಆಶ್ರಯದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ದ.20ರಂದು ಕುಂಬ್ರದಲ್ಲಿ ನಡೆಯಲಿದೆ. ಬೆಳಿಗ್ಗೆ ಒಳಮೊಗ್ರು ಗ್ರಾಪಂ ಕಛೇರಿ ಎದುರು ಭಾಗದಲ್ಲಿ ಶಿಬಿರ ಉದ್ಘಾಟನೆಗೊಂಡು ಬಳಿಕ ಪಂಚಾಯತ್ ವ್ಯಾಪ್ತಿಯ ಪರ್ಪುಂಜ ಶಾಲಾ ಬಳಿ, ಕುಟ್ಟಿನೋಪಿನಡ್ಕ ಜಂಕ್ಷನ್, ಮುಡಾಲ ಮರಾಟಿ ಸಮಾಜ ಮಂದಿರ ಬಳಿ, ದರ್ಬೆತ್ತಡ್ಕ ಶಾಲಾ ಬಳಿ, ಅಜಲಡ್ಕ ಸಮುದಾಯ ಭವನ ಬಳಿ, ಕೈಕಾರ ಹಾಲು ಸೊಸೈಟಿ ಬಳಿ, ಅಜ್ಜಿಕಲ್ಲು ಹಾಲು ಸೊಸೈಟಿ ಬಳಿ ಶಿಬಿರ ನಡೆಯಲಿದೆ. ಸಾರ್ವಜನಿಕರು ತಮ್ಮ ಸಾಕು ನಾಯಿಗಳನ್ನು ಆಯಾ ಸ್ಥಳಗಳಿಗೆ ತಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ರೇಬಿಸ್ ರೋಗದ ನಿರ್ಮೂಲನೆಗೆ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.