ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ:ನರಿಮೊಗರು ಮತ್ತು ಶಾಂತಿಗೋಡು ಗ್ರಾಮದ ಮಾದರಿ ದಂಪತಿಗಳಿಗೆ ಸನ್ಮಾನ

0

ಕಾವು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ, ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನರಿಮೊಗರು ಗ್ರಾಮದ ಸೆರಾಜೆ ಶ್ರೀ ಶಾರದಾ ಭಜನಾ ಮಂದಿರ ದಲ್ಲಿ 9 ಜೊತೆ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ಡಿ.16 ರಂದು ನಡೆಯಿತು.

ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಮಾತನಾಡಿ, ದಾಂಪತ್ಯ ಜೀವನದ ಪ್ರತಿ ಹೆಜ್ಜೆಯಲ್ಲೂ ಒಂದಾಗಿ ಸಾಗಿದ ಈ ದಂಪತಿಗಳು ಸಮಾಜಕ್ಕೆ ಮಾದರಿ ಎಂದರು. ನರಿಮೊಗರು ಒಕ್ಕೂಟದ ಅಧ್ಯಕ್ಷರಾದ ಗಂಗಾಧರ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದಶಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ಹೂವಪ್ಪ ಗೌಡ, ಮಾಗಣೆ ಗೌಡರಾದ ರಮೇಶ್ ಗೌಡ ಕೀನ್ಯಾ ಕಾಯರ್ ಮುಗೇರು, ಮಹಿಳಾ ಘಟಕದ ಅಧ್ಯಕ್ಷರಾದ ಪದ್ಮಾವತಿ ಯವರು ಶುಭ ಹಾರೈಸಿದರು.

ದಾಂಪತ್ಯ ಜೀವನದ 50 ವರ್ಷ ಪೂರೈಸಿದ ದಂಪತಿಗಳಾದ ತಿಮ್ಮಪ್ಪ ಗೌಡ ಮತ್ತು ರಾಮಕ್ಕ ಕಾಯರ್ ಮುಗೇರು, ಕುಂಞ್ಞಣ್ಣ ಗೌಡ ಮತ್ತು ಅಮ್ಮಕ್ಕ ಕಾಯರ್ ಮುಗೇರು, ಸೀತಾರಾಮ ಗೌಡ ಮತ್ತು ಕುಸುಮ ಕೆದ್ಕಾರ್, ಆನಂದ ಗೌಡ ಮತ್ತು ಕುಸುಮ ಕೆದ್ಕಾರ್ ಮನೆ, ತಿಮ್ಮಪ್ಪ ಗೌಡ ಮತ್ತು ಚಿನ್ನಮ್ಮ ಪಾಣಂಬು, ಮಾಧವ ಗೌಡ ಮತ್ತು ಶೋಭಾ ಪಾದೆ ಮನೆ, ಗಂಗಯ್ಯ ಗೌಡ ಮತ್ತು ಸುಂದರಿ ಸೊರಗೆತ್ತಡಿ, ಬಾಬುಗೌಡ ಮತ್ತು ಸೇಸಮ್ಮ ಕಕ್ವೆ ಬೈಲಾಡಿ, ನಾರ್ಣಪ್ಪ ಗೌಡ ಮತ್ತು ಕುಸುಮ ಮಜಲು, ಇವರುಗಳನ್ನು ಸನ್ಮಾನಿಸಲಾಯಿತು.

ಯಶೋಧ ಮಾಡತ್ತಾರು ಸ್ವಾಗತಿಸಿದರು. ನಾರಾಯಣಗೌಡ ಅರಿಪೆಕಟ್ಟ ವೀಳ್ಯ ನೀಡಿ ಅತಿಥಿಗಳನ್ನು ಬರಮಾಡಿಕೊಂಡರು. ಪ್ರೇರಕರಾದ ಹೇಮಲತಾ ಧನ್ಯವಾದಗೈದರು. ಮೇಲ್ವಿಚಾರಕರಾದ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಅನಾರೋಗ್ಯದಿಂದ ಕಾರ್ಯಕ್ರಮಕ್ಕೆ ಬಾರದ ದಂಪತಿಗಳಾದ ದೇವಪ್ಪಗೌಡ ಮತ್ತು ಕೆದ್ಕಾರ್ ಮನೆ, ಗುಡ್ಡಪ್ಪ ಗೌಡ ಮತ್ತು ಮೋನಕ್ಕ ಆನಾಜೆಯವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here