ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಪುತ್ತೂರು ಸರ್ವೆ ಒಕ್ಕೂಟದ ತ್ರೈಮಾಸಿಕ ಸಭೆ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಯೋಜನಾಧಿಕಾರಿ ಶಶಿಧರ್ ತಿಂಗಳ ವರದಿಯ ಬಗ್ಗೆ ಹಾಗೂ ಯೋಜನೆಯ ಬಗ್ಗೆ ಮಾಹಿತಿ ನೀಡಿ ತಂಡಗಳಿಗೆ ಲಾಭಾಂಶವನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಪುಷ್ಪಲತಾ ಹಾಗೂ ಸೇವಾ ಪ್ರತಿನಿಧಿ ರೇಖಾ ರೈ ಉಪಸ್ಥಿತರಿದ್ದರು.
ಕೀರ್ತಿ ಸಂಘವು ಕಾರ್ಯಕ್ರಮ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿತ್ತು. ತಂಡದ ಸದಸ್ಯ ದೀಕ್ಷಿತ್ ವರದಿ ವಾಚಿಸಿದರು. ಕಿಶೋರ್ ಸ್ವಾಗತಿಸಿದರು. ಶಿವರಾಮ ಗೌಡ ವಂದಿಸಿದರು. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ಹೇಮರಾಜ್ ಕಾರ್ಯಕ್ರಮ ನಿರೂಪಿಸಿದರು.