ವಿಟ್ಲ: ಕನ್ನಡ ಭವನ ಕೈಕುಂಜೆ ಇಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳ ತಾಲೂಕು 2024-25 ರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕರ್ನಾಟಕ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷ ವಿಶ್ವನಾಥ್ ಬಂಟ್ವಾಳ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬಂಟ್ವಾಳದ ನೂತನ ಅಧ್ಯಕ್ಷೆ ರಶ್ಮಿತಾ ಸುರೇಶ್ ಜೋಗಿಬೆಟ್ಟು, ತುಳು ಒಕ್ಕೂಟ ಬಂಟ್ವಾಳದ ಅಧ್ಯಕ್ಷ ಸುದರ್ಶನ್ ಜೈನ್, ಅಭಿಮತ ವಾಹಿನಿ ಮುಖ್ಯಸ್ಥೆ ಮಮತಾ ಪಿ. ಶೆಟ್ಟಿ, ಮುಖ್ಯಗುರು ಜಯರಾಮ ಪಡ್ರೆ, ಗ್ರಾಮ ಆಡಳಿತ ಅಧಿಕಾರಿ ಶ್ರೀಕಲಾ ಬಿ ಕಾರಂತ್, ಕರ್ನಾಟಕ ಜಾನಪದ ಪರಿಷತ್ತು ಬಂಟ್ವಾಳ ತಾಲೂಕಿನ ಅಧ್ಯಕ್ಷೆ ಪ್ರಮೀಳಾ ಮಾಣೂರು, ವಿಜಯ್ ಕುಮಾರ್ ಜೈನ್ ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ರಾಜ್ಯಸದಸ್ಯ ಎಚ್. ಕೆ ನಯನಾಡು, ಅಧ್ಯಕ್ಷ ನಿರೀಕ್ಷಿತಾ,ಉಪಾಧ್ಯಕ್ಷೆ ವಿಂಧ್ಯಾ ಎಸ್ ರೈ ಕಡೇಶಿವಾಲಯ, ನಿರ್ದೇಶಕ ಚೇತನ್ ಕುಮಾರ್ ಅಮೈ, ಬೆಳ್ತಂಗಡಿ ತಾಲೂಕಿನ ಅಧ್ಯಕ್ಷೆ ವಿದ್ಯಾಶ್ರೀ ಅಡೂರು, ಮೂಡಬಿದಿರೆ ತಾಲೂಕಿನ ಕಾರ್ಯದರ್ಶಿ ಸುಚಿತ್ರ ಉಪಸ್ಥಿತರಿದ್ದರು.
ನಂತರ ಇದೇ ವೇದಿಕೆಯಲ್ಲಿ ಸಾಹಿತ್ಯ ಪ್ರಸ್ತುತಿ ನಡೆಯಿತು. ಇದರ ಅಧ್ಯಕ್ಷತೆಯನ್ನು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ರಾಜ್ಯ ಸದಸ್ಯೆ ಆಶಾ ಅಡೂರು ವಹಿಸಿದ್ದರು. ವಿದ್ಯಾಶ್ರೀ ಅಡೂರು ಪ್ರಾರ್ಥಿಸಿ, ವಿಜಯ್ ಕುಮಾರ್ ಜೈನ್ ಸ್ವಾಗತಿಸಿ, ವಿಂಧ್ಯಾ ಎಸ್ ರೈ ವಂದಿಸಿದರು, ಶಶಿಧರ ಏಮಾಜೆ ಕಾರ್ಯಕ್ರಮ ನಿರೂಪಿಸಿದರು.