ವಿಟ್ಲ: ಟೆಂಪೊ ಹಾಗೂ ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಸೂರಿಕುಮೇರು ಎಂಬಲ್ಲಿ ಡಿ.18ರಂದು ರಾತ್ರಿ ವೇಳೆ ನಡೆದಿದೆ.
ಸುಳ್ಯ ನಿವಾಸಿ ಪುನೀತ್ ( 32 ವ.) ಮೃತ ದುರ್ದೈವಿ. ಕೋಸ್ಟಲ್ ಚಿಕನ್ ಕಂಪೆನಿಯಲ್ಲಿ ಚಾಲಕನಾಗಿದ್ದ ಪುನೀತ್ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಮಾಣಿಯ ಸೋಷಿಯಲ್ ಇಕ್ವ ಆ್ಯಂಬುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.