ಪುತ್ತೂರು: ಭಾರತೀಯ ಜನತಾ ಪಾರ್ಟಿ ಕಬಕ ಗ್ರಾಮದ ಬೂತ್ 65 ರ ಬೂತ್ ಪದಾಧಿಕಾರಿಗಳ ಪುನಃರಚನೆ ಸಭೆಯು ಜಯರಾಮ್ ನೆಕ್ಕರೆ ರವರ ಮನೆಯಲ್ಲಿ ನಡೆಯಿತು.
65ನೇ ಬೂತ್ ನ ನೂತನ ಅಧ್ಯಕ್ಷರಾಗಿ ವಸಂತ್ ದೇವಸ್ಯ,ಕಾರ್ಯದರ್ಶಿಯಾಗಿ ಶಿವಪ್ರಸಾದ್, ಬಿಎಲ್ಎ2 ಆಗಿ ಜಯರಾಮ್ ನೆಕ್ಕರೆ, ಲಾಭರ್ತಿ ಪ್ರಮುಖ ಪ್ರಕಾಶ್ ದೇವಸ್ಯ, ಮನ್ ಕೀ ಬಾತ್ ದೀಪಕ್ ದೇವಸ್ಯ, ವಾಟ್ಸಾಪ್ ಪ್ರಮುಖ ಧನಂಜಯ ದೇವಸ್ಯ, ಸಕ್ರಿಯ ಸದಸ್ಯರಾಗಿ ಸಂಜಯ ದೇವಸ್ಯ, ದಾಮೋಧರ್ ನೆಕ್ಕರೆ, ಪ್ರಸಾದ್ ಮೂವಳ, ರೇಷ್ಮಾ ನೆಕ್ಕರೆ, ವಾರಿಜ ಮದನಾಗುರಿ, ಪುಷ್ಪ ಮೂವಳರವರನ್ನು ಆಯ್ಕೆ ಮಾಡಲಾಯಿತು.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ದಿವ್ಯಾ ಮುಂಗ್ಲಿಮನೆ, ಪುತ್ತೂರು ಗ್ರಾಮಾಂತರ ಮಂಡಲದ ನಿಕಟ ಪೂರ್ವ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಪುತ್ತೂರು ಬಿಜೆಪಿ ಯುವ ಮೋರ್ಚಾ ಸದಸ್ಯರು ಪ್ರಶಾಂತ್ ಮೂವಳ,ಹಿರಿಯ ಸದಸ್ಯರಾದ ಚೆನ್ನಪ್ಪ ಗೌಡ ದೇವಸ್ಯ, ಲಕ್ಷ್ಮೀ ನೆಕ್ಕರೆ, ತಿಮ್ಮಪ್ಪ ಗೌಡ ನೆಕ್ಕರೆ ಮೊದಲಾದವರು ಉಪಸ್ಥಿತರಿದ್ದರು.