ಪುತ್ತೂರು:ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ 24 ಕಂಬಳ ಕೂಟಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಯಂತೆ ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ತಲಾ 5 ಲಕ್ಷದಂತೆ 1.20 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಅವರು ಅದೇಶಿಸಿದ್ದಾರೆ.
ತುಳುನಾಡಿನ ಹೆಮ್ಮೆಯ ಕ್ರೀಡೆ ಕಂಬಳಕ್ಕೆ ಆರ್ಥಿಕವಾಗಿ ಸರಕಾರದಿಂದ ಪ್ರೋತ್ಸಾಹ ದೊರಕಿರುವುದು ಕಂಬಳ ಕೂಟದ ಆಯೋಜಕರಿಗೆ ಮತ್ತು ಕಂಬಳ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಪ್ರತಿ ಕಂಬಳಕ್ಕೆ ಸರಕಾರ ತಲಾ 5 ಲಕ್ಷ ರೂ.ಅನುದಾನ ಬಿಡುಗಡೆ ಮಾಡಬೇಕೆಂದು ಶಾಸಕ ಅಶೋಕ್ ಕುಮಾರ್ ರೈಯವರು ಅಧಿವೇಶನದಲ್ಲಿ ಸರ್ಕಾರವನ್ನು ಅಗ್ರಹಿಸಿದ್ದರು.ಅವರ ಮನವಿಗೆ ಸ್ಪಂದಿಸಿದ ಸರಕಾರ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಡೆಯುವ ಪ್ರತೀ ಕಂಬಳ ಉತ್ಸವಕ್ಕೆ ತಲಾ ರೂ.5 ಲಕ್ಷದಂತೆ ಬಿಡುಗಡೆ ಮಾಡಬೇಕೆಂದು ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗಿತ್ತು. ಮನವಿಗೆ ಸ್ಪಂದಿಸಿದ ಸರಕಾರದ ಪ್ರವಾಸೋದ್ಯಮ ಸಚಿವರು ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.ಎಲ್ಲಾ ಕಂಬಳ ಆಯೋಜಕರ ಮತ್ತು ಅಭಿಮಾನಿಗಳ ಪರವಾಗಿ ಸರಕಾರಕ್ಕೆ ಧನ್ಯವಾದಗಳು-
ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು