ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ವಾರ್ಷಿಕೋತ್ಸವ

0

ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಶಾಲಾ ವಾರ್ಷಿಕೋತ್ಸವ ‘ಚಿನ್ನರ ಚಿಲುಮೆ’ ಕಾರ್ಯಕ್ರಮದ ಅಂಗವಾಗಿ ಡಿ.20ರಂದು ಧ್ವಜಾರೋಹಣ ಹಾಗೂ ಬಹುಮಾನ ವಿತರಣೆ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಗುರು, ಸಾಹಿತಿಗಳಾಗಿರುವ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಶಿಕ್ಷಣ ಕೇವಲ ಓದು ಬರಹವಲ್ಲ. ಶಿಕ್ಷಣದಲ್ಲಿ ಮಹತ್ವಪೂರ್ಣ ಅಂಶ ಅಡಗಿದೆ. ಶಿಕ್ಷಣ ಭರವಸೆಯ ಬಾಳಿನ ಬೆಳಕಾಗಬೇಕು. ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಜ್ಞಾನದ ಮುತ್ತುಗಳಾಗಬೇಕು ಎಂದರು. ಲಿಟ್ಲ್ ಫ್ಲವರ್‌ನ ವಿದ್ಯಾರ್ಥಿಗಳು ಬಿಗ್ ಸ್ಟಾರ್‌ಗಳು. ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ರಾಷ್ಟ್ರ ಮಟ್ಟದಲ್ಲಿ ಕಬಡ್ಡಿಯಲ್ಲಿ ಭಾಗವಹಿಸಿದ ಇಲ್ಲಿನ ವಿದ್ಯಾರ್ಥಿಗಳು ಅಮರ ತಾರೆಗಳು. ಶತಮಾನದ ಹೊಸ್ತಿಲಿನಲ್ಲಿರುವ ಈ ಶಾಲೆಯ ಮಹತ್ವ ಶಿಕ್ಷಣ ಕ್ಷೇತ್ರ, ರಾಷ್ಟ್ರ ಮಟ್ಟಕ್ಕೆ ವ್ಯಾಪಿಸಿದೆ ಎಂದರು.


ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರತಿಭೆ ಅನಾವರಣಗೊಳಿಸಬೇಕು. ಶಿಕ್ಷಕರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆದಾಗ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ ಎಂದರು.


ಶಿಕ್ಷಣ ಸಂಯೋಜಕಿ ಅಮೃತಕಲಾ ಮಾತನಾಡಿ, ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ಎಲ್ಲರಲ್ಲಿಯೂ ಒಂದೊಂದು ರೀತಿಯ ಪ್ರತಿಭೆಗಳಿರುತ್ತದೆ. ನಮ್ಮ ನಿರಂತರ ಪ್ರಯತ್ನದ ಮುಖಾಂತರ ಪ್ರತಿಭೆಗಳ ಅನಾವರಣಗೊಳ್ಳಬೇಕು. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಲಿಟ್ಲ್ ಫ್ಲವರ್ ಶಾಲೆಯನ್ನು ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಮಾತನಾಡಿ, ಶ್ರಮ ಮತ್ತು ಪ್ರಯತ್ನದಿಂದ ಯಶಸ್ಸು ಸಾಧ್ಯ. ಸೋಲಿನಿಂದ ಪಾಠ ಕಲಿತು ದೈರ್ಯದಿಂದದ ಯಶಸ್ವಿನತ್ತ ಸಾಗಬೇಕು. ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಸಿಕೊಂಡು ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳು ಸಾಧಿಸಿದ ಸಣ್ಣ ಯಶಸ್ಸು ಅದು ಜೀನದ ಯಶಸ್ಸಿನ ಅರಂಭವಾಗಬೇಕು. ಇದಕ್ಕೆ ಪೋಷಕರ ಸಹಕಾರ ಮುಖ್ಯ ಎಂದರು.

ಶಾಲಾ ರಕ್ಷಕ ಶಿಕ್ಷಕ ಸಂಘಧ ನಿಕಟಪೂರ್ವ ಉಪಾಧ್ಯಕ್ಷ ರಘುನಾಥ ರೈ ಹಾಗೂ ನಿವೃತ್ತ ಶಿಕ್ಷಕಿ ಡೋರತಿ ಡಿ’ಸೋಜ ಮಾತನಾಡಿ ಶುಭಹಾರೈಸಿದರು. ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಹಾಗೂ ಚೇತನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಬಹುಮಾನ ವಿತರಿಸಲಾಯಿತು.


ಮುಖ್ಯ ಶಿಕ್ಷಕಿ ವೆನಿಷಾ ಬಿ.ಎಸ್ ಸ್ವಾಗತಿಸಿದರು. ಶಿಕ್ಷಕರಾದ ವಿಲ್ಮಾ, ರಮ್ಯ, ಎಲಿಝ್, ಭವ್ಯ, ಹರಿಣಾಕ್ಷಿ, ಮಮತಾ, ರೇಷ್ಮಾ, ವೀಕಲ, ಭವ್ಯ, ನಳಿನಾಕ್ಷಿ, ಜಾಸ್ಲಿನ್ ಪಾಸ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದಿವ್ಯ ವಂದಿಸಿದರು. ಬಾಲಕೃಷ್ಣ ರೈ ಪೊರ್ದಾಲ್ ಹಾಗೂ ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.

ನಾಳೆ(ಡಿ.21) ಸಂಜೆ ವಾರ್ಷಿಕೋತ್ಸವ
ಶಾಲಾ ವಾರ್ಷಿಕೋತ್ಸವ ‘ಚಿನ್ನರ ಚಿಲುಮೆ’ ಡಿ.21ರಂದು ವಿನೂತನ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಲಿದೆ. ಇದಕ್ಕಾಗಿ ವಿಶಾಲವಾದ ವೇದಿಕೆ, ವೇದಿಕೆಯಲ್ಲಿ 36 ಅಡಿ ಉದ್ದದ ಎಲ್‌ಇಡಿ ಪರದೆ, ಸುಮಾರು 2000 ಮಂದಿ ಕುಳಿತುಹೊಳ್ಳುವ ವಿಶಾಲ ಸಭಾಂಗಣ, 4೦೦೦ ಮಂದಿ ಕುಳಿತುಕೊಳ್ಳಬಹುದಾದ ಫೆವಿಲಿಯನ್ ಸಿದ್ದಗೊಂಡಿದೆ. ವಾರ್ಷಿಕೋತ್ಸವಲ್ಲೆ ಶಾಲಾ ಆವರಣ ವಿದ್ಯುತ್ ದೀಪ ಅಲಂಕಾರದಿಂದ ಜಗಮಗಿಸುತ್ತಿದೆ. ಶಾಲೆಯು 800 ವಿದ್ಯಾರ್ಥಿಗಳಿಂದ 11 ವಿವಿಧ ರೀತಿಯ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಾಲಾ ಪಂಚ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ಪುಷ್ಪ ಪ್ರಶಸ್ತಿ ಪ್ರದಾನ, ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟದಲ್ಲಿ 5ನೇ ಸ್ಥಾನ ಪಡೆದ ಶಾಲಾ ತಂಡದ ಆಟಗಾರರು, ರಾಷ್ಟ್ರ ಮಟ್ಟದ ಕಬಡ್ಡಿ ತರಬೇತುದಾರರಿಗೆ, ಸಹಕರಿಸಿದವರಿಗೆ ಹಾಗೂ ಇನ್ನಿತರ ಹಲವು ರೀತಿಯಲ್ಲಿ ಸಹಕರಿಸಿದವರಿಗೆ ಸನ್ಮಾನ ನಡೆಯಲಿದೆ ಎಂದು ಶಾಲಾ ಮುಖ್ಯಗುರು ವೆನಿಶಾ ಬಿ.ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here