ಅನಾರೋಗ್ಯದಿಂದ ಗರ್ಭಿಣಿ ಸಾವು-ಪ್ರಕರಣ ದಾಖಲು

0

ಕಡಬ: ನಾಲ್ಕು ತಿಂಗಳ ಗರ್ಭಿಣಿ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಎಡಮಂಗಲ ಗ್ರಾಮದಿಂದ ವರದಿಯಾಗಿದೆ.


ಎಡಮಂಗಲ ಗ್ರಾಮದ ಡೆಕ್ಕಲದ ಶೀಲಾವತಿ ಎಂಬವರು ಮೃತಪಟ್ಟವರು. 13 ವರ್ಷಗಳ ಹಿಂದೆ ದಿನೇಶ್ ಎಂಬವರೊಂದಿಗೆ ಶೀಲಾವತಿಯವರ ಮದುವೆ ಆಗಿತ್ತು. 4 ತಿಂಗಳ ಗರ್ಭಿಣಿ ಆಗಿದ್ದ ಶೀಲಾವತಿಯವರು ಅನಾರೋಗ್ಯದ ಹಿನ್ನೆಲೆ ವಾರದ ಹಿಂದೆ ತವರು ಮನೆ ಸುಳ್ಯದ ಪಂಬೆತ್ತಾಡಿ ಗ್ರಾಮದ ಕರಿಕಳಕ್ಕೆ ಹೋಗಿ ಅಲ್ಲಿಯೇ ಇದ್ದರು. ಡಿ.18ರಂದು ಆರೋಗ್ಯ ಸರಿಯಿಲ್ಲ ಎಂದು ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


ಈ ಬಗ್ಗೆ ದಿನೇಶ್ ಅವರ ತಮ್ಮ ಮೋಹನ ಎಂಬವರು ಸುಬ್ರಹ್ಮಣ್ಯ ಠಾಣೆಗೆ ನೀಡಿದ ದೂರಿನಂತೆ UDR NO: 26/2024 ಕಲಂ: 194 BNSS 2023ಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here