ಕಲ್ಲಡ್ಕ ಡಾ.ಪ್ರಭಾಕರ ಭಟ್ ರಿಂದ ಗಾಂಧಿ, ನೆಹರುರವರಿಗೆ ಅವಮಾನ – ಅಮಳ ರಾಮಚಂದ್ರ ಆರೋಪ

0

ಪುತ್ತೂರು: ವಿವೇಕಾನಂದ ಕಾಲೇಜಿನ ಸಾವರ್ಕರ್ ವೇದಿಕೆ ಉದ್ಘಾಟನೆ ಹೆಸರಿನಲ್ಲಿ ದ್ಚೇಷ ಭಾಷಣ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ನೆಹರು ಅವರನ್ನು ಅವಮಾನಿಸುವ ಕೆಲಸ ಮಾಡಿರುವುದು ಖಂಡನೀಯ. ಅವಮಾನ ಮಾಡಿದ ಡಾ.ಪ್ರಭಾಕರ ಭಟ್ ಅವರ ಮೇಲೆ ಪೊಲೀಸರು ಸುಮೊಟೋ ಕೇಸು ದಾಖಲಿಸುವಂತೆ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.


ಕಲ್ಲಡ್ಕದ ಡಾ.ಪ್ರಭಾಕರ ಭಟ್ ಅವರು ಕಾಲೇಜಿನಲ್ಲಿ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮುಂದೆ ಹೇಗೆ ಮಾತನಾಡಬೇಕೆಂದು ತಿಳಿಸುವ ಕೆಲಸ ಆಗಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸಲು ಅವರಿಗೆ ಅಧಿಕಾರ ಕೊಟ್ಟವರು ಯಾರು. ಅವರು ವಿದ್ಯಾವರ್ಧಕ ಸಂಘದ ಅಧ್ಯಕ್ಷರೋ., ದ್ವೇಷ ವರ್ಧಕ ಸಂಘದ ಅಧ್ಯಕ್ಷರೋ..? ಪುತ್ತೂರಿನ ವಿದ್ಯಾರ್ಥಿಗಳಲ್ಲಿ ಕೋಮುದ್ವೇಷ ಬೆಳೆಸಿ, ಅವರನ್ನು ಹಾಳು ಮಾಡಲು ಅಧಿಕಾರ ಕೊಟ್ಟವರು ಯಾರು? ಅವರು ಆ ಸಂಸ್ಥೆಯ ಅಧ್ಯಕ್ಷರಾಗಿರಬಹುದು. ಆದರೆ ಕಾಲೇಜಿನ ಕಾರ್ಯಕ್ರಮದಲ್ಲಿ ಕೋಮುವಾದದ ಭಾಷಣ ಮಾಡಬಹುದಾ ? ಇನ್ನೂ ಬಾಳಿ ಬೆಳಗಬೇಕಾದ ನವ ಯುವಕರ ತಲೆಗೆ ಕೋಮುದ್ವೇಷ ತುಂಬುವುದು ಸರಿಯಲ್ಲ. ಅವರ ದ್ವೇಷ ಭಾಷಣವನ್ನು ಪುತ್ತೂರು ಸಹಿಸುವುದಿಲ್ಲ ಎಂದ ಅವರು ಗಾಂಧಿ ಮತ್ತು ನೆಹರೂರವರನ್ನು ತ್ಯಾಗಿಗಳಲ್ಲ , ಅವರನ್ನು ಅರಮನೆಯಲ್ಲಿ ಹೂವಿನ ಹಾಸಿಗೆಯಲ್ಲಿ ಮಲಗಿಸಿದರು ಎಂದು ಸುಳ್ಳು ಆರೋಪ ಸರಿಯಲ್ಲ ಎಂದರು.

ಈ ಕುರಿತು ದಾಖಲೆ ಇದ್ದರೆ ತೋರಿಸಿ ಎಂದ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ ಸಾವರ್ಕರ್ ಅವರು ಕ್ಷಮಾಪಣೆ ಕೇಳಿ ಜೈಲಿನಿಂದ ಬಿಡುಗಡೆಯಾಗಿದ್ದರು. ಗಾಂಧಿ ಮತ್ತು ನೆಹರು ಅವರನ್ನು ದ್ವೇಷ ಭಾಷಣ ಮೂಲಕ ಅವಮಾನಿಸಿದ ಡಾ.ಪ್ರಭಾಕರ ಭಟ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಸದಸ್ಯರಾದ ಮೌರೀಸ್ ಮಸ್ಕರೇನಸ್, ಉಲ್ಲಾಸ್ ಕೋಟ್ಯಾನ್, ಯುನೀಕ್ ರೆಹಮಾನ್, ಗಗನ್ ಬನ್ನೂರು ಕರ್ಮಲ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here