ಪುತ್ತೂರು: ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘ ಇದರ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಅವಿರೋಧ ಆಯ್ಕೆ ನಡೆದಿದೆ. ಸಂಘದ ಸಾಮಾನ್ಯ ಸ್ಥಾನಗಳು 7, ಪ.ಜಾತಿ ಮೀಸಲು ಸ್ಥಾನ 1, ಪ.ಪಂಗಡ ಮೀಸಲು ಸ್ಥಾನ 1, ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನ 1, ಹಿಂದುಳಿದ ವರ್ಗ ‘ಎ’ ಮೀಸಲು ಸ್ಥಾನ 1 ಹಾಗೂ ಮಹಿಳಾ ಮೀಸಲು 2 ಒಟ್ಟು 13 ಸ್ಥಾನಗಳಿಗೆ ದ.25 ರಂದು ಚುನಾವಣೆ ನಡೆಯಬೇಕಿತ್ತು ಆದರೆ ನಾಮಪತ್ರ ಸಲ್ಲಿಸಿದ ಒಟ್ಟು 12 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಪರಿಶಿಷ್ಟ ಪಂಗಡದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರುಗಳಾಗಿ ಸಾಮಾನ್ಯ ಕ್ಷೇತ್ರದಿಂದ ಶುಭಪ್ರಕಾಶ್ ಎರಬೈಲು, ಡೊಂಬಯ್ಯ ಗೌಡ ಕೋಡಂಬು, ವಿಶ್ವನಾಥ ಶೆಟ್ಟಿ ಸಾಗು, ತಾರಾನಾಥ ಗೌಡ ಎರಕ್ಕಲ, ಎ.ಗಂಗಾಧರ ಗೌಡ ಎರಕ್ಕಲ, ಪ್ರಮೋದ್ ಕುಮಾರ್ ಬರಮೇಲು, ಶಾಲಿನಿ ಎಸ್.ರೈ ಸಾಗು, ಮಹಿಳಾ ಮೀಸಲು ಸ್ಥಾನದಿಂದ ಲೀಲಾವತಿ ರೈ ಕೋಡಂಬು, ನಯ ಎಸ್ ಶೆಟ್ಟಿ ಸಾಗು,ಪರಿಶಿಷ್ಟ ಪಂಗಡ ಸ್ಥಾನದಿಂದ ಹರಿಕೃಷ್ಣ ಜೆ ಜೋಡುಗಾವಲು, ಹಿಂದುಳಿದ ವರ್ಗ ಎ ಸ್ಥಾನದಿಂದ ಚಂದ್ರಶೇಖರ ಸೊರಕೆ, ಬಿ ಸ್ಥಾನದಿಂದ ಪ್ರಸಾದ್ ರೈ ಸೊರಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಕವಿತಾ ಕೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಘದ ಕಾರ್ಯದರ್ಶಿ ಅರ್ಪಣಾ ಹಾಗೂ ಸಿಬ್ಬಂದಿಗಳು ಸಹಕರಿಸಿದ್ದರು.