ಪುಣಚ: ಪುಣಚ ದಲ್ಕಾಜೆಗುತ್ತು ಶ್ರೀ ಜಠಾಧಾರಿ, ಮಲರಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಡಿ.28 ರಿಂದ ಡಿ.30ರವರೆಗೆ ನಡೆಯಲಿದ್ದು, ಗೊನೆ ಮುಹೂರ್ತವು ಡಿ.21ರಂದು ಬೆಳಿಗ್ಗೆ ದೈವಸ್ಥಾನದ ಬಳಿ ನಡೆಯಿತು.
ದೈವದ ಪರಿಚಾರಕರು ಪ್ರಾರ್ಥನೆಯ ಮೂಲಕ ಗೊನೆ ಮುಹೂರ್ತ ನೆರವೇರಿಸಿದರು. ದೈವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಉತ್ಸವ ಸಮಿತಿ ಪದಾಧಿಕಾರಿಗಳು, ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.