ಜ.01: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ-ನಾಮಪತ್ರ ಸಲ್ಲಿಕೆ ಆರಂಭ

0

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗೆ ಜ.01 ರಂದು ಚುನಾವಣೆ ನಡೆಯಲಿದೆ.

ಸಾಲಗಾರರ ಕ್ಷೇತ್ರದಿಂದ 5 ಸಾಮಾನ್ಯ ಸ್ಥಾನಗಳು, ಪ.ಜಾತಿ ಮೀಸಲು 1 ಮತ್ತು ಪ.ಪಂಗಡ ಮೀಸಲು ಸ್ಥಾನ 1, ಹಿಂದುಳಿದ ಪ್ರವರ್ಗ ಎ ಮೀಸಲು ಸ್ಥಾನ 1, ಹಿಂದುಳಿದ ವರ್ಗ ಬಿ.ಮೀಸಲು ಸ್ಥಾನ 1 ಹಾಗೂ ಮಹಿಳಾ ಮೀಸಲು ಸ್ಥಾನ 2 ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 1 ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ದ.20 ರಂದು ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ದ.24 ನಾಮಪತ್ರ ಸಲ್ಲಿಸಲು ಕೊನೇಯ ದಿನಾಂಕವಾಗಿದೆ. ದ.25 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ದ.26 ನಾಮಪತ್ರ ಹಿಂಪಡೆಯಲು ಕೊನೇಯ ದಿನಾಂಕವಾಗಿರುತ್ತದೆ.ದ.28 ರಂದು ಸಿಂಧುತ್ವ ಹೊಂದಿರುವ ಅಭ್ಯರ್ಥಿಗಳ ಪಟ್ಟಿ ಚಿಹ್ನೆಯೊಂದಿಗೆ ಪ್ರಕಟಣೆಗೊಳ್ಳಲಿದೆ.

ಜ.1 ರಂದು ಬೆಳಿಗ್ಗೆಯಿಂದ ಸಂಜೆ ತನಕ ಮತದಾನ ನಡೆದು ಸಂಜೆ ಮತ ಎಣಿಕೆಯ ಬಳಿಕ ಫಲಿತಾಂಶ ಘೋಷಣೆಯಾಗಲಿದೆ. ನಾಮಪತ್ರ ಸಲ್ಲಿಕೆಯ ಮೊದಲ ದಿನ 5 ನಾಮಪತ್ರಗಳು ಸಲ್ಲಿಕೆಯಾಗಿದ್ದು ಸಾಲಗಾರ ಸಾಮಾನ್ಯ ಕ್ಷೇತ್ರಕ್ಕೆ ಶಶಿಕಿರಣ್ ರೈ ನೂಜಿಬೈಲು, ಸಾರ್ಥಕ್ ರೈ ಅರಿಯಡ್ಕ, ವಿನೋದ್ ಶೆಟ್ಟಿ ಮುಡಾಲ, ರಕ್ಷಿತ್ ರೈ ಮುಗೇರು ಮತ್ತು ಮಹಿಳಾ ಸಾಮಾನ್ಯ ಕ್ಷೇತ್ರಕ್ಕೆ ಕಲಾವತಿ ಗೌಡ ಪಟ್ಲಡ್ಕ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here