ಪುತ್ತೂರು :ಸಂವಿಧಾನ ಶಿಲ್ಪಿ ಡಾ!ಬಿ. ಆರ್ ಅಂಬೇಡ್ಕರ್ ರವರಿಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ ಕೇಂದ್ರ ಸರಕಾರದ ಗೃಹ ಮಂತ್ರಿ ಅಮಿತ್ ಶಾ ರವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಪುತ್ತೂರು ಎಸ್ ಡಿ ಪಿ ಐ ಕ್ಷೇತ್ರ ಸಮಿತಿ ವತಿಯಿಂದ ದರ್ಬೆ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದಿಕ್, ಕೋಶಾಧಿಕಾರಿ ಹಮೀದ್ ಸಾಲ್ಮರ, ಉದಯ ಕುಮಾರ್ ಕೆಯ್ಯೂರು ಮಾತನಾಡಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿದರು. ಈ ಸಂದರ್ ಎಸ್ ಡಿ ಪಿ ಐ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.