ಕಡಬ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕಡಬ ಘಟಕದ ಪದಗ್ರಹಣ ಸಮಾರಂಭವು ಕಡಬ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಡಿ.22ರಂದು ನಡೆಯಲಿದೆ.
ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿಯವರು ಕಾರ್ಯಕ್ರಮದ ದೀಪ ಪ್ರಜ್ವಲನೆ ನಡೆಸಲಿದ್ದು, ಯುವವಾಹಿನಿ ಕೇಂದ್ರ ಘಟಕದ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಪ್ರತಿಜ್ಞಾ ವಿಧಿ ಭೋಧನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸೈನಿಕರಾದ ಹರೀಶ್ ಕುಮಾರ್ ಪುತ್ತಿಲ, ಕಡಬ ತಾಲೂಕು ಬಿಲ್ಲವ ಸಂಚಲನ ಸಮಿತಿಯ ಸಂಚಾಲಕ ಜಿನ್ನಪ್ಪ ಸಾಲ್ಯಾನ್ ಕಡಬ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ಅವರು ಉಪಸ್ಥಿತರಿರಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಸುಂದರ ಪೂಜಾರಿ ಅಂಗಣ ವಹಿಸಲಿದ್ದಾರೆ.
ಪದಾಧಿಕಾರಿಗಳು
2024-25ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಎನ್.ಎಸ್. ಕಾರ್ಯದರ್ಶಿಯಾಗಿ ನವೀನ್ ಕೊಂಬಾರು, ಉಪಾಧ್ಯಕ್ಷರಾಗಿ ಉಮೇಶ್ ಬುಡಂಗಿ ಬಳ್ಪ, ಜತೆ ಕಾರ್ಯದರ್ಶಿಯಾಗಿ ನಿಶ್ಮತಾ ಅಮೈ, ಕೋಶಾಧಿಕಾರಿಯಾಗಿ ರಾಜು ಪಿ.ಜಿ. ಪದವು, ವಿದ್ಯಾನಿಧಿ ನಿರ್ದೇಶಕರಾಗಿ ಚೇತನ್ ಪಿ, ಭಜನಾ ನಿರ್ದೇಶಕರಾಗಿ ಜಯಪ್ರಕಾಶ್ ದೋಳ, ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಅನಿತಾ ಕುತ್ಪಾಡಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಸುಧಾಕರ ಬಾರಿಕೆ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಸರಿತಾ ಉಂಡಿಲ, ಸಮಾಜಸೇವಾ ನಿರ್ದೇಶಕರಾಗಿ ಸತೀಶ್ ಪೂಜಾರಿ ಕೊರಪ್ಪಣೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಪ್ರೇಮ ವಿದ್ಯಾನಗರ, ಮಹಿಳಾ ನಿರ್ದೇಶಕರಾಗಿ ಜಯಂತಿ ನಂದೋಳಿ, ವಿದ್ಯಾರ್ಥಿ ಸಂಘಟನೆ ಪ್ರಮುಖರಾಗಿ ಮಹೇಶ್ ಕೆ., ಪ್ರಚಾರ ನಿರ್ದೇಶಕರಾಗಿ ದೀಕ್ಷಿತ್ ಪಣೆಮಜಲು, ಸಂಘಟನಾ ಕಾರ್ಯದಶಿಯಾಗಿ ಹರೀಣಾಕ್ಷಿ ಪಣೆಮಜಲು, ಮಾನಸತಾರನಾಥ ಮರ್ದಾಳ, ಅಶೋಕ್ ಕೊಂಡ್ಯಾಡಿ ರಾಮಕುಂಜ, ಉಮೇಶ್.ಬಿ, ವಿಜಯಕುಮಾರ್ ಸುವರ್ಣ, ಹರ್ಷಿತ್ ಮಾಯಿಲ್ಗವರುಗಳು ಆಯ್ಕೆಯಾಗಿದ್ದು ಇವರಿಗೆ ಪದಪ್ರಧಾನ ನಡೆಯಲಿದೆ.