ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯಿಂದ ಕಾವು ಹೇಮನಾಥ ಶೆಟ್ಟಿಯವರ 60 ನೇ ಹುಟ್ಟು ಹಬ್ಬ ಆಚರಣೆ

0

ಪುತ್ತೂರು;ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯಿಂದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ 60 ನೇ ಹುಟ್ಟು ಹಬ್ಬ ಆಚರಣೆಯನ್ನು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭನವದ ಬಂಟರ ಚಾವಡಿಯಲ್ಲಿ ಜರಗಿತು.


ಕಾವು ಹೇಮನಾಥ ಶೆಟ್ಟಿಯವರನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.ಹೇಮನಾಥ ಶೆಟ್ಟಿ ಮಾತನಾಡಿ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರ ಆಶಯದಂತೆ ಬಂಟರ ಭವನದ ಬಂಟೆರೆ ಚಾವಡಿಯ ಪ್ರಥಮ ಕಾರ್‍ಯಕ್ರಮದಲ್ಲಿ ನನ್ನ ಹುಟ್ಟು ಹಬ್ಬದ ಆಚರಣೆ ಮತ್ತು ಸನ್ಮಾನ ದೊರೆತಿರುವುದು ತುಂಬಾ ಸಂತೋಷ ತಂದಿದೆ. ಮಾತೃ ಸಂಘದ ಪುತ್ತೂರು ಸಂಚಾಲಕರಾಗಿರುವ ಕುಂಬ್ರ ದುರ್ಗಾಪ್ರಸಾದ್ ರೈವರನ್ನು ನಾನು ಬಹಳ ವರ್ಷದಿಂದ ಬಲ್ಲೆ, ಅವರ ಯೋಜನೆ ಮತ್ತು ಯೋಚನೆ ನಿಜಕ್ಕೂ ಅನುಕರಣೀಯ, ಅವರ ಅಪೇಕ್ಷೆಯಂತೆ ಉತ್ತಮ ಕಾರ್‍ಯಕ್ರಮಗಳು ಮುಂದೆಯು ಈ ಚಾವಡಿಯಲ್ಲಿ ನಡೆಯಲಿ ಎಂದು ಆಶಿಸಿ, ಹುಟ್ಟು ಹಬ್ಬಕ್ಕೆ ಶುಭಹಾರೈಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶ ಒದಗಿಬರಲಿ
ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ಹೇಮನಾಥ ಶೆಟ್ಟಿಯವರ 60 ನೇ ಹುಟ್ಟುಹಬ್ಬವನ್ನು ಆಚರಿಸುವ ಯೋಗಕೂಡಿ ಬಂತು. ಅವರಿಗೆ ಮುಂದೆ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಸಿಗಲಿ, ಪುತ್ತೂರಿನಲ್ಲಿ ಕಷ್ಟಕಾಲದಲ್ಲಿ ಸಹಾಯ, ಸಹಕಾರವನ್ನು ನೀಡುವ ಹೇಮನಾಥ ಶೆಟ್ಟಿಯವರಿಂದ ಮತ್ತಷ್ಟು ಸೇವೆ ಸಮಾಜಕ್ಕೆ ದೊರೆಯಲಿ ಎಂದು ಶುಭಹಾರೈಸಿದರು.


ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ವಂದಿಸಿದರು. ನಿರ್ದೇಶಕರಾದ ದಯಾನಂದ ರೈ ಮನವಳಿಕೆಗುತ್ತು, ಜಯಪ್ರಕಾಶ್ ರೈ ನೂಜಿಬೈಲು, ಜೈರಾಜ್ ಭಂಡಾರಿ ಡಿಂಬ್ರಿ, ವಾಣಿ ಎಸ್ ಶೆಟ್ಟಿ, ರಮೇಶ್ ರೈ ಸಾಂತ್ಯ, ನಿತ್ಯಾನಂದ ಶೆಟ್ಟಿ ಮನವಳಿಕೆ, ಬಂಟರ ಸಂಘದ ನಿರ್ದೇಶಕ ರವಿಪ್ರಸಾದ್ ಶೆಟ್ಟಿ ಬನ್ನೂರು, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ,ಶಿವಪ್ರಸಾದ್ ಶೆಟ್ಟಿಕಿನಾರ, ಶಿವಕುಮಾರ್ ಶೆಟ್ಟಿ ದರ್ಬೆ, ಸಂತೋಷ್ ಕುಮಾರ್ ಗಾಡಿಗುಡ್ಡೆ, ಉಮಾಪ್ರಸಾದ್ ರೈ ನಡುಬೈಲು, ಬಂಟರ ಭವನದ ಭಾಸ್ಕರ್ ರೈ ಎಂ ಹಾಗೂ ರವಿಚಂದ್ರ ರೈ ಕುಂಬ್ರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here