ಅನ್ಯನ್ಯ ಭಕ್ತಿ, ಪ್ರೀತಿ ನಮ್ಮಲ್ಲಿದ್ದಾಗ ಭಗವಂತನ ಒಲುಮೆ ಸಾಧ್ಯ: ಶ್ರೀಕಾಂತ್ ಶೆಟ್ಟಿ
ಉಪ್ಪಿನಂಗಡಿ: ದುಡ್ಡು, ರಾಜಕೀಯ ಬಲದಿಂದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಅನನ್ಯವಾದ ಭಕ್ತಿ ಹಾಗೂ ಪ್ರೀತಿ ನಮ್ಮಲ್ಲಿದ್ದಾಗ ಮಾತ್ರ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದರು.
ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ 4ನೇ ದಿನವಾದ ಡಿ.21ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ವ್ಯವಸ್ಥೆಗಳ ಮೇಲೆ ನಮ್ಮ ದೇವಾಲಯಗಳು ಕೇಂದ್ರೀಕೃತವಾಗಿದ್ದು, ಭೌತಿಕವಾದ ಗುಡಿಯಲ್ಲಿ ನಡೆಯುವ ಬ್ರಹ್ಮಕಲಶೋತ್ಸವದಿಂದ ಪ್ರತಿ ಹಿಂದೂಗಳ ಮನೆ- ಮನಗಳಲ್ಲೂ ಬ್ರಹ್ಮಕಲಶಗಳು ನಡೆಯಬೇಕು. ಸನಾತನ ಹಿಂದೂ ನಂಬಿಕೆ, ಆಚರಣೆಗಳು ಜಾತಿ, ಮತ ಬೇಧವಿಲ್ಲದೆ ಎಲ್ಲರನ್ನೂ ಆಕರ್ಷಿಸುವಂತಿದ್ದು, ಮುಂದಿನ ತಲೆಮಾರುಗಳು ಹಿಂದೂ ಸಮಾಜದ ಶಕ್ತಿಗಳಾಗಿವೆ. ಆದ್ದರಿಂದ ಪ್ರತಿ ದೇವಾಲಯಗಳಲ್ಲೂ ವಾರಕ್ಕೊಂದು ದಿನವಾದರೂ ಎಲ್ಲರನ್ನೂ ಸೇರಿಸಿ ಧಾರ್ಮಿಕ ಬೋಧನೆ ನೀಡುವ ಕಾರ್ಯವಾಗಬೇಕು. ಈ ಮೂಲಕ ದೇವಸ್ಥಾನ ಕೇಂದ್ರಿತವಾಗಿ ಹಿಂದೂ ಸಮಾಜವನ್ನು ಸಂಘಟಿಸುವುದರೊಂದಿಗೆ ನಮ್ಮ ಸನಾತನ ಧರ್ಮದ ಸಂಸ್ಕಾರ, ಆಚರಣೆಗಳನ್ನು ಮುಂದಿನ ಪೀಳಿಗೆಗೆ ನೀಡುವ ಕೆಲಸವಾಗಬೇಕು. ಬಾಂಗ್ಲಾದಲ್ಲಿ ಹಿಂದೂ ಸಮಾಜ ದುರ್ಬಲವಾಗಿದ್ದರಿಂದಲೇ ಇಂದು ಅಲ್ಲಿ ಹಿಂದೂ ಸಮಾಜದ ಮೇಲೆ ನಿರಂತರ ದಾಳಿಯಾಗೋದಕ್ಕೆ ಕಾರಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಅಶೋಕ್ ಕುಮಾರ್ ರೈ, ಕಣ್ಣಿಗೆ ಕಾಣುವ ದೇವರ ರೂಪವೇ ನಮ್ಮ ತಂದೆ- ತಾಯಿ. ತಂದೆ ತಾಯಿಯ ಸೇವೆ ಮಾಡಿದ್ರೆ ಮಾತ್ರ ದೇವರ ಕೃಪೆ ಸದಾ ಲಭಿಸಲು ಸಾಧ್ಯ. ದೇವರ ಒಲುಮೆ ಪಡೆದಾಗ ಮಾತ್ರ ಎಲ್ಲವೂ ಸಿದ್ಧಿಸುವುದು. ಧರ್ಮ ಶಿಕ್ಷಣದ ಮೂಲಕ ಧಾರ್ಮಿಕ ವಿಧಿ-ವಿಧಾನಗಳ ಜ್ಞಾನ ಎಲ್ಲರಿಗೂ ತಿಳಿಸುವ ಕಾರ್ಯ ದೇವಾಲಯಗಳಿಂದಾಗಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಎಸ್ಸೆಫ್‌ನ ನಿವೃತ್ತ ಡೆಪ್ಯೂಟಿ ಕಮಾಡೆಂಟ್ ಹಾಗೂ ಪದಾಳ ಶ್ರೀ ಸುಬ್ರಹ್ಮಣ್ಯ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಇಂದು ಹಿಂದೂತ್ವದ ರಾಷ್ಟ್ರೋತ್ಥಾನದ ಕಾರ್ಯವಾಗುತ್ತಿದ್ದು, ಹಿಂದೂ ಸಮಾಜ ಒಗ್ಗಟ್ಟು ಪ್ರದರ್ಶನ ಮಾಡಿದಾಗ ಮಾತ್ರ ದುಷ್ಟರು ದೂರ ಸರಿಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ನಡುಸಾರು ಉದಯಶಂಕರ ಭಟ್ಟ, ಬ್ರಹಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಜಗದೀಶ ರಾವ್ ಮಣಿಕ್ಕಳ, ಉಪಾಧ್ಯಕ್ಷೆ ಉಷಾಚಂದ್ರ ಮುಳಿಯ, ಮಹಾದಾನಿಗಳಾದ ವಿದ್ಯುತ್ ಮತ್ತು ಧ್ವನಿವರ್ಧಕ ಸಮಿತಿಯ ಸಂಚಾಲಕರಾದ ವಸಂತ ಕೋಟ್ಯಾನ್ ಕುಕ್ಕೇಶ್ರೀ, ಶ್ರೀರಾಮ ಭಟ್ ಪಾತಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಸುರೇಶ ಅತ್ರೆಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಜೊತೆ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಬೊಳ್ಳಾವು, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್ ಕುವೆಚ್ಚಾರು, ಬಿ. ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೊಕೇಶ ಪೂಜಾರಿ ಬೆತ್ತೋಡಿ, ವಿಜಯಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ಲಕ್ಷ್ಮಣ ಗೌಡ ನೆಡ್ಚಿಲು, ನವೀನ್ ಕುಮಾರ್ ಕಲ್ಯಾಟೆ, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಾ. ರಾಜಾರಾಮ ಕೆ.ಬಿ., ಪ್ರತಾಪ್ ಯು. ಪೆರಿಯಡ್ಕ, ಪ್ರಧಾನ ಕಾರ್ಯದರ್ಶಿ ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿಗಳಾದ ಸುರೇಶ ಗೌಂಡತ್ತಿಗೆ, ಚಪ್ಪರ ಸಮಿತಿಯ ಹೊನ್ನಪ್ಪ ಗೌಡ ವರೆಕ್ಕ, ವಸಂತ ನಾಯ್ಕ ಬೊಳ್ಳಾವು, ಸದಸ್ಯರಾದ ದಾಮೋದರ ಗೌಡ ಬೊಳ್ಳಾವು, ಸೇಸಪ್ಪ ಗೌಡ ಬೊಳ್ಳಾವು, ಜಗದೀಶ ಕೊಡಂಗೆ, ಸಂಜೀವ ಮಡಿವಾಳ, ರಾಜೇಶ ಕಜೆಕ್ಕಾರು, ಆನಂದ ಕಜೆಕ್ಕಾರು, ರಘು ಪೂಜಾರಿ ಬೂಡು, ಸ್ವಾಗತ ಸಮಿತಿಯ ಸದಸ್ಯ ವಿದ್ಯಾಧರ ಜೈನ್, ಆರ್ಥಿಕ ಸಮಿತಿಯ ಸಂಚಾಲಕರಾದ ಧರ್ಣಪ್ಪ ನಾಯ್ಕ ಬೊಳ್ಳಾವು, ವಿವಿಧ ಸಮಿತಿಗಳ ಪ್ರಶಾಂತ ಯು. ಪೆರಿಯಡ್ಕ, ಲಿಖಿತ್ ರಂಗಾಜೆ, ಕೃಷ್ಣಪ್ಪ ಗೌಡ ಬೊಳ್ಳಾವು, ಉದಯ ಅತ್ರೆಮಜಲು, ಆನಂದ ಗೌಡ ಕುಂಟಿನಿ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಹರೀಶ ಪಟ್ಲ, ಪ್ರಸನ್ನ ಪೆರಿಯಡ್ಕ, ಕೈಲಾರು ರಾಜಗೋಪಾಲ ಭಟ್, ವಸಂತ ಕುಂಟಿನಿ, ಚಂದ್ರಶೇಖರ ಕೋಡಿ, ಲಿಖಿತ್ ರಂಗಾಜೆ, ಹರಿಪ್ರಸಾದ್ ಭಟ್ ಕುವೆಚ್ಚಾರು, ಪ್ರಹ್ಲಾದ್ ಪೆರಿಯಡ್ಕ, ಸುರೇಶ ನಲಿಕೆಮಜಲು, ಹರೀಶ ಪಟ್ಲ, ನಾರಾಯಣ ಭಟ್ ಟೈಲರ್, ಬಾಲಕೃಷ್ಣ ಶರಣ್ಯ, ಶಿವಪ್ಪ ಶ್ರೀಷಣ್ಮುಖ ಪ್ರಸನ್ನ, ದುರ್ಗಾಕುಮಾರ್ ಪೆರಿಯಡ್ಕ, ಸುಧಾಕರ ಕಣಿಯ, ದೇವಪ್ಪ ಗೌಡ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ಶೀನಪ್ಪ ಗೌಡ ಬೊಳ್ಳಾವು, ರಾಮಚಂದ್ರ ನೆಡ್ಚಿಲು, ಪದ್ಮನಾಭ ಗೌಡ ನೆಡ್ಚಿಲು, ಚಂದ್ರಶೇಖರ ನಲಿಕೆಮಜಲು, ಭವ್ಯಾ ಬೊಳ್ಳಾವು, ಪುಷ್ಪವಲ್ಲಿ ಪೆರಿಯಡ್ಕ, ಯಶೋಧಾ ಆರ್ತಿಲ, ರಕ್ಷಿತ್ ಪೆರಿಯಡ್ಕ, ರಾಜೇಶ್ ಕೊಡಂಗೆ, ಶ್ರೀನಿವಾಸ ನಾಯ್ಕ ಬೊಳ್ಳಾವು, ಮಹಾಲಿಂಗ ಕಜೆಕ್ಕಾರು, ಪ್ರೇಮ ಬಲ್ಯಾರಬೆಟ್ಟು, ನಳಿನಾಕ್ಷಿ ಆರ್. ಮಣಿಯಾಣಿ, ಯಶುಂತಳ ಆಳ್ವ ಮಠ, ಶ್ರೀಲತಾ ಪೆರಿಯಡ್ಕ, ವಿಜಯಲಕ್ಷ್ಮೀ ಪೆರಿಯಡ್ಕ, ಶೇಖರ ಪಂಚೇರು, ಹೊನ್ನಪ್ಪ ಗೌಡ ಬೊಳ್ಳಾವು, ಕೃಷ್ಣಪ್ರಸಾದ್ ಬೊಳ್ಳಾವು, ವನಿತಾ ನೆಡ್ಚಿಲು, ಸುಬ್ರಹ್ಮಣ್ಯ ಭಟ್ ಕಲ್ಲಾಜೆ, ರಾಮಚಂದ್ರ ಭಟ್ ಕಲ್ಲಾಜೆ, ಚೇತನ್ ಮೊಗ್ರಾಲ್ ಕುವೆಚ್ಚಾರು, ಚರಣ್ ಬಲ್ಯಾರಬೆಟ್ಟು, ಕಾರ್ತಿಕ್ ಬಲ್ಯಾರಬೆಟ್ಟು, ದೇವದಾಸ ಕಿಂಡೋವು, ಬಿ. ರಾಧಾಕೃಷ್ಣ ಭಟ್ ಬೊಳ್ಳಾವು, ಶ್ರೀಮತಿ ವಿಮಲಾ ತೇಜಾಕ್ಷಿ, ರಂಜಿತ್ ಪೆರಿಯಡ್ಕ, ಗಿರೀಶ್ ಆರ್ತಿಲ, ಮುರಳೀಧರ ಆರ್ತಿಲ ಮತ್ತಿತರರು ಉಪಸ್ಥಿತರಿದ್ದರು.
ಚೇತನಾ, ಚೈತನ್ಯ, ಅಂಕಿತಾ ಕಜೆಕ್ಕಾರು ಪ್ರಾರ್ಥಿಸಿದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಅವನೀಶ್ ಪಿ. ಪೆರಿಯಡ್ಕ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸಂಚಾಲಕರಾದ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.
ಪದಾಳ ಕ್ಷೇತ್ರದಲ್ಲಿ ಇಂದು
ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ 5ನೇ ದಿನವಾದ ಡಿ.22ರಂದು ಬೆಳಗ್ಗೆ 5ರಿಂದ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12:30ರಿಂದ ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ರಿಂದ ವೈದಿಕ ಕಾರ್ಯಕ್ರಮಗಳು ನಡೆದು ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಪ್ರಸಾದ ಭೋಜನ ನಡೆಯಲಿದೆ.
ಭಜನಾ ಸೇವೆ: ದಿ. ನಡುಸಾರು ಜಯರಾಮ ಭಟ್ಟ ವೇದಿಕೆಯಲ್ಲಿ ಪೂರ್ವಾಹ್ನ 7ರಿಂದ 5ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ: ಮಯೂರ ಕಲಾ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ಸ್ಥಳೀಯರಿಂದ ಕಾರ್ಯಕ್ರಮ, ಪೂರ್ವಾಹ್ನ 11ರಿಂದ 1ರವರೆಗೆ ಡಾ. ಎಸ್.ಪಿ. ಗುರುದಾಸ್ ಮಂಗಳೂರು ಅವರಿಂದ ಹರಿಕಥಾ ಸತ್ಸಂಗ, ಮಧ್ಯಾಹ್ನ 1ರಿಂದ 3ರವರೆಗೆ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಅಪರಾಹ್ನ 3ರಿಂದ 4ರವರೆಗೆ ಸ್ಥಳೀಯ ಮಕ್ಕಳ ಕಾರ್ಯಕ್ರಮ, ಸಂಜೆ 4ರಿಂದ 6:3೦ರವರೆಗೆ ಸಾಂಸ್ಕೃತಿಕ ಕಲಾ ವೇದಿಕೆ ಪೆರಿಯಡ್ಕ ಇವರಿಂದ ‘ಶ್ರೀ ಕೃಷ್ಣ ಸಂಧಾನ’ ತಾಳಮದ್ದಳೆ ನಡೆಯಲಿದೆ.
ರಾತ್ರಿ 7ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವಕೀಲ ಒಡಿಯೂರು ಶಾಮ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಹರೀಶ್ ಪೂಂಜಾ, ಪುತ್ತೂರು ಕೋಟಿ- ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಿವೃತ್ತ ಆದಾಯ ತೆರಿಗೆ ಅಧಿಕಾರಿ ಕೆ.ಎ. ಚಂದ್ರಕುಮಾರ್, ಬೆಂಗಳೂರಿನ ಉದ್ಯಮಿ ಕಿರಣಚಂದ್ರ ಪುಷ್ಪಗಿರಿ ಭಾಗವಹಿಸಲಿದ್ದಾರೆ. ರಾತ್ರಿ 9ರಿಂದ ‘ನಿರೆಲ್’ ತುಳು ನಾಟಕ ನಡೆಯಲಿದೆ.