ಪುತ್ತೂರು: ಕುರಿಯ ಗ್ರಾಮದ ಓಟೆತ್ತಿಮಾರು ಕುಟುಂಬದ ಕಲ್ಲುರ್ಟಿ, ಧರ್ಮದೈವ ಪಂಜುರ್ಲಿ, ಗಡಿಮುಗೇರ್ಕಲ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಮತ್ತು ದೈವಗಳ ನೇಮೋತ್ಸವ ಡಿ.21ರಿಂದ ಆರಂಭಗೊಂಡಿದ್ದು ಡಿ.23ರವರೆಗೆ ನಡೆಯಲಿದೆ.
ಡಿ.21ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮೃತ್ಯುಂಜಯ ಹೋಮ ಪೂರ್ಣಾಹುತಿ, ಪ್ರಸಾದ ವಿತರಣೆ, ಸಂಜೆ, ವಾಸ್ತುಹೋಮ, ವಾಸ್ತು ಬಲಿ, ಪ್ರಸಾದ ವಿತರಣೆ ನಡೆಯಿತು. ಡಿ.22ರಂದು ಬ್ರಾಹ್ಮಿ ಮುಹೂರ್ತದಲ್ಲಿ ಗಣಹೋಮ, ಕಲಶಪೂಜೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪರ್ವಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಕೊರತಿ, ಚೌಕಾರು ಮಂತ್ರವಾದಿ ಗುಳಿಗ, ಕಲ್ಲುರ್ಟಿ ಮತ್ತು ಧರ್ಮದೈವ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಡಿ.23ರಂದು ಗಡಿಮೊಗೇರ ಮತ್ತು ಕೊರಗತನಿಯ ದೈವದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.