ನಾಳೆ ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಬಂಧುತ್ವ ಕ್ರಿಸ್‌ಮಸ್, ಶಾಂತಿ ಸಂದೇಶ, ಸಾಂಸ್ಕೃತಿಕ ಸಂಜೆ

0

ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಬಂಧುತ್ವ ಕ್ರಿಸ್‌ಮಸ್, ಶಾಂತಿ ಸಂದೇಶ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಡಿ.25ರಂದು ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ಸಂಜೆ 5.30ರಿಂದ ನಡೆಯಲಿದೆ.

ಖ್ಯಾತ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ದ.ಕ.ಈಸ್ಟ್ ಜಿಲ್ಲೆಯ ಎಸ್‌ಕೆಎಸ್‌ಎಸ್‌ಎಫ್ ಉಪಾದ್ಯಕ್ಷ ಪಿ.ಎ ಝಕರಿಯಾ ಅಸ್ಲಮಿ ಮರ್ಧಾಳ ಹಾಗೂ ಪೆರುವಾಯಿ ಫಾತಿಮಾ ಚರ್ಚ್‌ನ ಧರ್ಮಗುರು ಸೈಮನ್ ಡಿಸೋಜ ಬಂಧುತ್ವ ಕ್ರಿಸ್‌ಮಸ್ ಸಂದೇಶ ನೀಡಲಿದ್ದಾರೆ.

ಗೌರವ ಉಪಸ್ಥಿತಿಯಾಗಿ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಪುತ್ತೂರು ಪೊಲೀಸ್ ಉಪನಿರೀಕ್ಷಕ ಅರುಣ್ ನಾಗೇಗೌಡ, ಪುತ್ತೂರು ತಹಶೀಲ್ದಾರ್ ಪುರಂದರ, ಪುತ್ತೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ವಂ.ಡಾ.ಎಲ್ದೋ ಪುತ್ತೆನ್ ಕಂಡತ್ತಿಲ್ ಕೋರ್ಪಿಸ್ಕೋಪ, ಪುತ್ತೂರು ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ವಂ.ವಿಜಯ ಹಾರ್ವಿನ್, ಪುತ್ತೂರು ಸಾನ್ ತೋಂ ಗುರುಮಂದಿರದ ರೆಕ್ಟರ್ ವಂ.ಜೋಸೆಫ್ ಕೇಳಂಪರಂಬಿಲ್, ಜಿಎಲ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಬಲರಾಮ ಆಚಾರ್ಯ, ಪುತ್ತೂರು ಕೇಂದ್ರ ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಅಬ್ದುಲ್ ರಹೀಮಾನ್ ಅಝಾದ್ ಭಾಗವಹಿಸಲಿದ್ದಾರೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ವಂ.ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರು ವಂ.ಲೋಹಿತ್ ಅಜಯ್ ಮಸ್ಕರೇನಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಕಾರ್ಯದರ್ಶಿ ಯೆವುಲಿನ್ ಡಿಸೋಜ, ೨೦ ಆಯೋಗಗಳ ಸಂಯೋಕ ಜಾನ್ ಡಿಸೋಜ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here