ಡಿ.26:ಜೇಸಿಐ ಪುತ್ತೂರು ಪದಪ್ರದಾನ: ಲೋಕಾಯುಕ್ತ ನಿವೃತ್ತ ಚೀಫ್ ಜಸ್ಟೀಸ್ ಸಂತೋಷ್ ಹೆಗ್ಡೆ ಆಗಮನ

0

ಪುತ್ತೂರು: ಅಂತರ್ರಾಷ್ಟ್ರೀಯ ಜೇಸಿಐ ಪುತ್ತೂರು ವಲಯ 15ರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಡಿ.26 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಲಿದೆ.


ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೋಕಾಯಕ್ತ ಇದರ ನಿವೃತ್ತ ಚೀಫ್ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಆಂಟನಿ ಪ್ರಕಾಶ್ ಮೊಂತೇರೊ, ಜೇಸಿಐ ಇಂಡಿಯಾದ ವಲಯ 15, ರೀಜ್ಹನ್ ಇ ಇದರ ವಲಯ ಉಪಾಧ್ಯಕ್ಷ(ಝಡ್‌ವಿಪಿ) ಸುಹಾಸ್ ಎಪಿಎಸ್‌ರವರು ಭಾಗವಹಿಸಲಿದ್ದಾರೆ.


ನೂತನ ತಂಡ:
2025ನೇ ಸಾಲಿನ ಪುತ್ತೂರು ಜೇಸಿಐ ಅಧ್ಯಕ್ಷರಾಗಿ ಭಾಗ್ಯೇಶ್ ರೈ, ನಿಕಟಪೂರ್ವ ಅಧ್ಯಕ್ಷರಾಗಿ ಮೋಹನ ಕೆ, ಉಪಾಧ್ಯಕ್ಷರುಗಳಾಗಿ ಜಿತೇಶ್ ರೈ(ನಿರ್ವಹಣೆ), ಶರತ್ ಶ್ರೀನಿವಾಸ್(ತರಬೇತಿ), ರಾಜಶೇಖರ್(ಕಾರ್ಯಕ್ರಮ), ವಿಘ್ನೇಶ್(ಬೆಳವಣಿಗೆ ಮತ್ತು ಅಭಿವೃದ್ಧಿ), ಸುಹಾಸ್ ರೈ(ಉದ್ಯಮ), ನಿರೋಶ್(ಸಾರ್ವಜನಿಕ ಸಂಪರ್ಕ & ಮಾರ್ಕೆಟಿಂಗ್), ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೊತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ರುಕ್ಮಯ, ಮಹಿಳಾ ಜೇಸಿ ಸಂಯೋಜಕರಾಗಿ ಆಶಾ ಮೋಹನ್, ಜೆಜೆಸಿ ವಿಂಗ್ ಚೇರ್‌ಪರ್ಸನ್ ಸ್ವಸ್ಥಿ ಶೆಟ್ಟಿ, ಜೆಜೆಸಿ ವಿಂಗ್ ಸಂಯೋಜಕರಾಗಿ ಅಶ್ವಿನಿ ಕೆ, ನಿರ್ವಹಣೆ ನಿರ್ದೇಶಕರಾಗಿ ಪ್ರಜ್ವಲ್ ರೈ ಸೊರಕೆ, ಸುಪ್ರೀತ್ ಕೆ.ಸಿ, ಬೆಳವಣಿಗೆ ಮತ್ತು ಅಭಿವೃದ್ಧಿ ನಿರ್ದೇಶಕರಾಗಿ ಗೌರವ್ ಭಾರದ್ವಾಜ್, ವಿರೂಪಾಕ್ಷ, ತರಬೇತಿ ನಿರ್ದೇಶಕರಾಗಿ ಜಗನ್ನಾಥ್ ಅರಿಯಡ್ಕ, ಅನೂಪ್ ಕೆ.ಜೆ, ಕಾರ್ಯಕ್ರಮ ನಿರ್ದೇಶಕರಾಗಿ ಸಂದೀಪ್ ರೈ, ಶೋಭಾ ರೈ, ಉದ್ಯಮ ನಿರ್ದೆಶಕರಾಗಿ ಪ್ರಜ್ವಲ್ ಡಿ’ಸೋಜ, ಹರಿಗಣೇಶ್, ಸಾರ್ವಜನಿಕ ಸಂಪರ್ಕ & ಮಾರ್ಕೆಟಿಂಗ್ ನಿರ್ದೇಶಕರಾಗಿ ಸಾಯಿರಾಮ್ ಬಾಳಿಲ, ರಕ್ಷಿತ್, ನಳಪಾಕ ಸಂಯೋಜಕರಾಗಿ ಸತೀಶ್ ನಾಕ್, ಶರತ್ ಆಳ್ವ, ಸಂದೇಶ್ ರೈ, ಚೇತನ್‌ರವರು ಆಯ್ಕೆಯಾಗಿದ್ದು ಜೇಸಿಐ ಮಾಜಿ ಅಧ್ಯಕ್ಷರುಗಳು ಸಲಹೆಗಾರರಾಗಿ ಮಾರ್ಗದರ್ಶನ ನೀಡಲಿದ್ದಾರೆ.

LEAVE A REPLY

Please enter your comment!
Please enter your name here