ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಸೇವಾ ಪ್ರತಿನಿಧಿಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿಯು ದ.20 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ವ್ಯಾಪ್ತಿಯ 64 ಕಾರ್ಯ ಕ್ಷೇತ್ರದ 64 ಸೇವಪ್ರಾತಿನಿಧಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ನಡೆಯಿತು. ಈ ತರಬೇತಿ ಕಾರ್ಯಗಾರವನ್ನು ಕೇಂದ್ರ ಕಚೇರಿ ಸೇವಾಪ್ರತಿ ವಿಭಾಗದ ಯೋಜನಾಧಿಕಾರಿ ಶಿವಪ್ರಸಾದ್ ಉದ್ಘಾಟಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಧರ್ಮಸ್ಥಳದ ಹಿನ್ನಲೆ ಹಾಗೂ ನಡೆದು ಬಂದ ದಾರಿ ,ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿಟ್ಲ ಯೋಜನಾಧಿಕಾರಿ ರಮೇಶ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.ಕೇಂದ್ರ ಕಛೇರಿಯ ಸೇವಾಪ್ರತಿನಿಧಿ ವಿಭಾಗದ ಯೋಜನಾಧಿಕಾರಿಗಳು ಸೇವಾಪ್ರತಿನಿಧಿಗಳ ವಿವಿಧ ಕೆಲಸ ಕಾರ್ಯಗಳಿಗೆ ನೀಡಲಾಗುವ ಉತ್ತೇಜಕಗಳು,ಗೌರವಧನ ದಿನ ಭತ್ಯೇ ಇತ್ಯಾದಿ ಸೇವಾ ಪ್ರತಿನಿಧಿಗಳಲ್ಲಿರಬೇಕಾದ ಗುಣ ನಡತೆಗಳು,ಅರ್ಹತೆಗಳು,ವಿದ್ಯಾಭ್ಯಾಸ ಇತ್ಯಾದಿಗಳ ಬಗ್ಗೆ ತಿಳಿಸಿದರು.
ಎಂಐಎಸ್ ಯೋಜನಾಧಿಕಾರಿ ಶಕುಂತಲಾ ಯೋಜನೆಯ ಕುರಿತು ಪ್ರಾಥಮಿಕ ದಶ ಅಂಶಗಳು, ಬ್ಯಾಂಕ್ ಎಂ. ಒ ಯು ಎಂದರೇನು,ಅದರ ಪ್ರಾಮುಖ್ಯತೆ, ಆರ್. ಬಿ. ಐ ಲೈಸೆನ್ಸ್ ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ಬಗ್ಗೆ ತಿಳಿಸಿದರು.
ಗುಂಪು ಲೆಕ್ಕಪರಿಶೋಧನಾ ವಿಭಾಗದ ಯೋಜನಾಧಿಕಾರಿ ಆನಂದ ಕೇಂದ್ರ ಕಚೇರಿ ಧರ್ಮಸ್ಥಳ ಬಡ್ಡಿ ಲೆಕ್ಕಾಚಾರ ವಿವಿಧ ರೀತಿಯ ಬಡ್ಡಿಗಳು, ಇತರ ಸಂಸ್ಥೆಗಳ ಬಡ್ಡಿ ಲೆಕ್ಕಾಚಾರ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಬಡ್ಡಿದರದ ವಿಶ್ಲೇಷಣೆಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಸಿ ಆರ್ ಐ ಪ್ರಾಂಶುಪಾಲ ಸೋಮನಾಥ ಮನೆ ಭೇಟಿಯ ಮಹತ್ವ ವಿಧಾನ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಪ್ರಬಂಧಕ ದಾದಫೀರ್ ಮೈಕ್ರೊಲ್ಯಾಬ್ ನಡೆಸಿಕೊಟ್ಟರು. ಕಚೇರಿ ಪ್ರಬಂಧಕ ವಾಣಿ ವಂದಿಸಿದರು.