ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರ ಸಮೀಪದ ಶೇಖಮಲೆಯಲ್ಲಿ 407 ಟೆಂಪೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ಡಿ.24ರಂದು ಸಂಜೆ ನಡೆದಿದೆ.
ಪುತ್ತೂರು ಕಡೆಗೆ ಬರುತ್ತಿದ್ದ ಬೈಕ್ ಶೇಖಮಲೆಯಲ್ಲಿ ಬೊಳ್ಳಾಡಿಗೆ ತಿರುವು ಪಡೆದುಕೊಳ್ಳುತ್ತಿದ್ದ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.ತಕ್ಷಣ ಅವರನ್ನು ಸ್ಥಳೀಯರಾದ ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ, ಅಂಗಡಿ ಮಾಲಕ ಸಲಾಮ್, ಎಸ್.ವಿ ಸತೀಶ್, ಪ್ರಮೋದ್ ರೈ ಅರಿಯಡ್ಕ ಮತ್ತಿತರರು ಸೇರಿಕೊಂಡು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.
ಅಪಘಾತ ಸಂಭವಿಸಿದ ತಕ್ಷಣವೇ 108 ಆಂಬುಲೆನ್ಸ್ಗೆ ಕರೆ ಮಾಡಿದ್ದರೂ ಸರಿಯಾದ ಸಮಯದಕ್ಕೆ ಆಂಬುಲೆನ್ಸ್ ಬರಲಿಲ್ಲ ಎನ್ನಲಾಗಿದೆ. ಕರೆ ಮಾಡಿದಾಗ ಅದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕನೆಕ್ಟ್ ಆಗುತ್ತಿದ್ದು ಅಲ್ಲೆ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಇದರಿಂದ ಗಾಯಾಳುವಿಗೆ ತೊಂದರೆಯಾಗುತ್ತದೆ. ಆಂಬುಲೆನ್ಸ್ಗೆ ಮಾಡುವ ಕರೆ ನೇರವಾಗಿ ಕನೆಕ್ಟ್ ಆಗುವಂತೆ ಆಗಬೇಕು ಎಂದು ಅಶೋಕ್ ಪೂಜಾರಿ ಬೊಳ್ಳಾಡಿ ಪ್ರತಿಕ್ರಿಯಿಸಿದ್ದಾರೆ.