ಪುತ್ತೂರು: ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕುರುಂಜಿ ಡಾ.ಚಿದಾನಂದ ಗೌಡ ಮತ್ತು ಮನೆಯವರು ದಾನ ರೂಪದಲ್ಲಿ ಸಮರ್ಪಣೆ ಮಾಡಲಿರುವ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಬ್ರಹ್ಮರಥವನ್ನು ಕುಂಬ್ರದಲ್ಲಿ ಅದ್ಧೂರಿ ಸ್ವಾಗತ ಮಾಡಲಾಯಿತು. ಬ್ರಹ್ಮರಥವು ಕುಂಭಾಶಿ ತೆಕ್ಕಟ್ಟೆಯಿಂದ ಹೊರಟು ಸುಳ್ಯಕ್ಕೆ ಸಾಗುವ ವೇಳೆ ಕುಂಬ್ರದಲ್ಲಿ ಕುಂಬ್ರ ಶ್ರೀ ರಾಮ ಭಜನಾ ಮಂದಿರ ಹಾಗೂ ಸ್ಪಂದನಾ ಸೇವಾ ಬಳಗ ಹಾಗೂ ಭಕ್ತಾಧಿಗಳ ವತಿಯಂದ ಸ್ವಾಗತಿಸಲಾಯಿತು. ವಿಶೇಷವಾಗಿ ರಥಕ್ಕೆ ಆರತಿ ಮಾಡಿ, ಪುಷ್ಪಾರ್ಚನೆ ಮಾಡಿ, ತೆಂಗಿನ ಕಾಯಿ ಒಡೆಯುವ ಮೂಲಕ ಸ್ವಾಗತಿಸಲಾಯಿತು. ಸುಡುಮದ್ದು ಪ್ರದರ್ಶನ ಹಾಗೂ ಸೇರಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕುರುಂಜಿ ಡಾ.ಚಿದಾನಂದ ಗೌಡರವರು ಮಾತನಾಡಿ, ಸೇರಿದ ಸಮಸ್ತ ಭಕ್ತಾಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಿ ಶ್ರೀ ಚೆನ್ನಕೇಶವ ದೇವರು ಒಳ್ಳೆಯದನ್ನು ಮಾಡಲಿ ಎಂದು ಹರಸಿದರು. ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಉಪಾಧ್ಯಕ್ಷ ರಾಜೇಶ್ ರೈ ಪರ್ಪುಂಜ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಎಸ್.ಮಾಧವ ರೈ ಕುಂಬ್ರ, ಉಷಾ ನಾರಾಯಣ್, ರಾಜೀವಿ ಕುಂಬ್ರ, ಶರತ್ ಗೌಡ ಗುತ್ತು, ಕವನ್ ಮುಡಾಲ, ಪುರಂದರ ಶೆಟ್ಟಿ ಮುಡಾಲ,ನಾರಾಯಣ ಪೂಜಾರಿ ಕುರಿಕ್ಕಾರ, ವಾರಿಜಾಕ್ಷಿ ಶೆಟ್ಟಿ, ಆಶಾಲತಾ ಎಂ.ರೈ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ರಂಗಭೂಮಿ ಕಲಾವಿದ ಸುಂದರ ರೈ ಮಂದಾರ ಸ್ವಾಗತಿಸಿ, ವಂದಿಸಿದರು.