ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿ ಕೊಪ್ಪದಲ್ಲಿ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಕ್ರೀಡಾಕೂಟ ನಡೆಯಿತು.
ಸಾಮಾಜಿಕ ಕಾರ್ಯಕರ್ತ ಈಶ್ವರ ಭಟ್ ಕೊಂಡಾಡಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಇತ್ತೀಚೆಗೆ ನಿಧನರಾದ ಮೋಹನ ಕಮಿತ್ತಿಲುರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೋಹನ ಕಮಿತ್ತಿಲುರವರ ಧರ್ಮಪತ್ನಿ ಮೀನಾಕ್ಷಿಯವರಿಗೆ ಶಾಲಾ ವತಿಯಿಂದ ನಗದು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲತಾ ಶರವೂರು, ಉಪಾಧ್ಯಕ್ಷ ಹರೀಶ್ ಏಂತಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಕೊಂಡಾಡಿಕೊಪ್ಪ, ಉಪಾಧ್ಯಕ್ಷೆ ಮೋಕ್ಷಿತಾ ಕೊಂಡಾಡಿಕೊಪ್ಪ, ಶಾಲಾ ನಾಯಕ ರಕ್ಷಣ್ ಉಪಸ್ಥಿತರಿದ್ದರು. ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಗಣೇಶ ಪೂಜಾರಿ, ಪ್ರೇಮಾವತಿ ಕೊಂಡಾಡಿಕೊಪ್ಪ, ನಿತ್ಯಾನಂದ ನಾಡ್ತಿಲ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಜಯಂತ್ ವೈ ಸ್ವಾಗತಿಸಿ, ಸಹಶಿಕ್ಷಕಿ ದಿವ್ಯಾ ವಿ ವಂದಿಸಿದರು. ಸಹಶಿಕ್ಷಕಿ ಸೌಮ್ಯ ನಿರೂಪಿಸಿದರು.