ಸತ್ಯ ಶಾಂತ ಪ್ರತಿಷ್ಠಾನ ವತಿಯಿಂದ ಶ್ರೇಯಾ ಕಡಬಗೆ “ಕಲಾಸಾಧಕಿ” ಪ್ರಶಸ್ತಿ

0

ಪುತ್ತೂರು:ಪುತ್ತೂರಿನ ಮುರ ಬನಾರಿಯಲ್ಲಿ ಸತ್ಯಶಾಂತ ಪ್ರತಿಷ್ಠಾನ ಇದರ ರಾಜ್ಯಮಟ್ಟದ ಕಿರುಕಥಾ ಸ್ಪರ್ಧಾ ಬಹುಮಾನ ವಿತರಣೆ, ಸಾಹಿತ್ಯ, ಸಾಂಸ್ಕೃತಿಕ, ಗಾನ ಲಹರಿ, ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಡಿ. 25ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಗಾಯಕಿ ಹಾಗೂ ಬಹುಮುಖ ಪ್ರತಿಭೆ ಕಡಬದ ಶ್ರೇಯಾ ಸಿ. ಪಿ ಇವರಿಗೆ “ಕಲಾಸಾಧಕಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಸತ್ಯ ಶಾಂತ ಪ್ರತಿಷ್ಠಾನ 257 ಇದರ ಸ್ಥಾಪಕಾಧ್ಯಕ್ಷೆ ಶಾಂತ ಕುಂಟಿನಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಹಳೆ ನ್ಯೂಸ್ ಚಾನೆಲ್ ನ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ, ಕರ್ನಾಟಕ ಸಾಹಿತ್ಯ ಪರಿಷತ್ ಪುತ್ತೂರು ಇದರ ಅಧ್ಯಕ್ಷ ಉಮೇಶ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಕೋಶಾಧ್ಯಕ್ಷ ಐತಪ್ಪ ನಾಯಕ್, ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷ ನಾಗೇಶ್, ಹಾಗೂ ಸಮಾಜ ಸೇವಕಿ ಲಕ್ಷ್ಮಿ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಡಬದ ವಿದ್ಯಾನಗರದ ದಿ.ಚಿದಾನಂದ ಪೂಜಾರಿ ಹಾಗೂ ಪ್ರೇಮಾ ದಂಪತಿಗಳ ಮಗಳಾದ ಶ್ರೇಯಾ ಸಿ ಪಿ ಅವರು ಪದವಿ ಶಿಕ್ಷಣವನ್ನು ಪುತ್ತೂರಿನ ವಿವೇಕಾನಂದ ಕಾಲೇಜುನಲ್ಲಿ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here