ಪುತ್ತೂರು: ಸತ್ಯ ಶಾಂತ ಪ್ರತಿಷ್ಠಾನ (ರಿ), ಸತ್ಯ ಶಾಂತ ಶ್ರೀನಿವಾಸ ಮುರ ಬನಾರಿಯಲ್ಲಿ ಡಿ.25 ರಂದು ರಾಜ್ಯ ಮಟ್ಟದ ಕಿರುಕಥಾ ಸ್ಪರ್ಧಾ ಬಹುಮಾನ ವಿತರಣೆ, ಸಾಹಿತ್ಯ, ಸಾಂಸ್ಕೃತಿಕ, ಗಾನ ಲಹರಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ಅದ್ದೂರಿಯಾಗಿ ನಡೆಯಿತು.
ಗಿಡಕ್ಕೆ ನೀರನ್ನೆರೆಯುವ ಮೂಲಕ ಕವಿಗೋಷ್ಠಿಗೆ ಚಾಲನೆ ನೀಡಲಾಯಿತು. ಗುಣಾಜೆ ರಾಮಚಂದ್ರ ಭಟ್, ಸುರೇಶ್ ನೆಗಳಗುಳಿ ಹಾಗೂ ಗಣೇಶ ಪ್ರಸಾದ್ ಪಾಂಡೇಲು ರವರ ಸುಧೀರ್ಘ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯನ್ನು ನಡೆಸಲಾಯಿತು.
ಮಧ್ಯಾಹ್ನ ಸಭಾ ಕಾರ್ಯಕ್ರಮ ಪ್ರಾರಂಭವಾಗಿ, ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಇವರ ಉದ್ಘಾಟನೆಯೊಂದಿಗೆ ಪ್ರಾರಂಭವಾಗಿ ಸತ್ಯ ಶಾಂತ ಪ್ರತಿಷ್ಠಾನವು ಸಾಹಿತ್ಯ ಸಾಂಸ್ಕೃತಿಕ ವಿಷಯದಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಶಾಂತಾ ಕುಂಟಿನಿ ಇವರು ಅನೇಕರಿಗೆ ವೇದಿಕೆ ಹಾಗೂ ಅವಕಾಶ ಅದೇ ರೀತಿ ಪ್ರಶಸ್ತಿಯನ್ನು ನೀಡುವುದರ ಮುಖೇನ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ ಎಂದರು. ಗೌರವ ಉಪಸ್ಥಿತಿಯೊಂದಿಗೆ ದ.ಕ ಜಿಲ್ಲಾ ಕ.ಸಾ.ಪ ದ ಗೌರವ ಕೋಶಾಧ್ಯಕ್ಷರಾದ ಐತ್ತಪ್ಪ ನಾಯ್ಕ್, ಶಾಂತಾ ಕುಂಟಿನಿ ನನ್ನ ಶಿಷ್ಯೆ. ಸತ್ಯ ಶಾಂತ ಪ್ರತಿಷ್ಠಾನ ಸಂಸ್ಥೆ ಕಟ್ಟಿ ಉತ್ತಮವಾದ ಕೆಲಸ ಕಾರ್ಯಗಳನ್ನು ಮಾಡುವುದರ ಮುಖೇನ ನನ್ನ ಶಿಷ್ಯೆಯಾಗಿ ಕೀರ್ತಿ ತಂದಿದ್ದಾಳೆ ಎಂದು ಹರಸಿದರು.
ಕ.ಸಾ.ಪ ಪುತ್ತೂರು ತಾಲೂಕಿನ ಅಧ್ಯಕ್ಷರಾದ ಉಮೇಶ್ ನಾಯಕ್. ಸತ್ಯ ಶಾಂತ ಪ್ರತಿಷ್ಠಾನಕ್ಕೂ ಶಾಂತಕ್ಕನಿಗೂ, ಈ ಸಂಸ್ಥೆಯ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ವತಂತ್ರವಾಗಿ ಕಾರ್ಯಕ್ರಮ ನಿರ್ವಹಿಸುವ ಹಕ್ಕಿದೆ ಎಂದು ನುಡಿದರು. ನಂತರ ಹಿರಿಯ ಸಾಹಿತಿಗಳಾದ ವಿ.ಬಿ ಅರ್ತಿಕಜೆ ಹಾಗೂ ಮಧುಪ್ರಪಂಚದ ಸಂಪಾದಕರಾದ ನಾರಾಯಣ ರೈ ಕುಕ್ಕುವಳ್ಳಿ ಸೇರಿ
ಪ್ರಶಸ್ತಿ ಪುರಸ್ಕ್ರತರಾದ ಅನಿಲ್ ಹಾಂದಿ(ಸತ್ಯ ಶಾಂತ ಪ್ರತಿಷ್ಠಾನ ಗೌರವ ಕಲಾ ಸಾಧಕ), ಬಿ ರಾಜೀವ ಗೌಡ ಇವರಿಗೆ (ಕ್ರಿಯಾ ಶೀಲ ಸಾಧಕ), ದಿನೇಶ್ ಮಂಗಳೂರು ಇವರಿಗೆ ( ಗಾನ ಮಾಂತ್ರಿಕ) ಹಾಗೂ ರವಿ ಪಾಂಬಾರು ಇವರ ಸಾಧನೆಯನ್ನು ಗುರುತಿಸಿ (ಕ್ರಿಯಾ ಶೀಲ ಸಾಧಕ) ಹಾಗೂ ಶ್ರೇಯಾ ಕಡಬ ಬಹುಮುಖ ಪ್ರತಿಭೆಗೆ (ಕಲಾ ಸಾಧಕಿ) ಹಾಗೂ ಕೃಷ್ಣ ವೇಣಿ ಇವರಿಗೆ ಕಲಾ ಪ್ರೇರಣಾ ಪ್ರಶಸ್ತಿ ಪ್ರದಾನ ಹಾಗೂ ಕಿರುಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನ ಸ್ಮರಣಿಕೆ ಪ್ರಶಸ್ತಿ ಪತ್ರ., ಪ್ರಥಮ 500 ರೂ. ಹಾಗೂ ದ್ವಿತೀಯ 350 ಹಾಗೂ ತೃತೀಯ 225 ರೂ ಹಾಗೂ ಕವನ ವಾಚಿಸಿದ 40 ಸನ್ಮಿತ್ರ ಕವಿಗಳಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಸತ್ಯ ಕುಂಟಿನಿ ಇವರ ಪ್ರಾರ್ಥನಾ ಶ್ಲೋಕದೊಂದಿಗೆ ಆರಂಭವಾಗಿ ಮಂಗಳೂರು ಎಸ್.ಡಿ.ಎಮ್. ಲಾ ಕಾಲೇಜು ಇದರ ವಿದ್ಯಾರ್ಥಿಯಾದ ಸತ್ಯಾತ್ಮ ಭಟ್ ಕುಂಟಿನಿ ಇವರು ಸ್ವಾಗತಿಸಿದರು. ಅಂತೆಯೇ ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷರಾದ ಶಾಂತಾ ಕುಂಟಿನಿ ಶಕುಂತಲಾ ಇವರು ಪ್ರಸ್ತಾವನೆಗೈದರು. ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಣೆಗೈದರು.
ಕೋಶಾಧ್ಯಕ್ಷರಾದ ಜಯರಾಮ ಯು ಪ್ರಶಸ್ತಿ ಪತ್ರ ಪ್ರಸ್ತಾವನೆ ಗೈದರು. ಉಪಾಧ್ಯಕ್ಷರಾದ ಉದಯ್ ಶಂಕರ್ ಧನ್ಯವಾದ ಸಮರ್ಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಹಾಡು ಹಾಗೂ ನೃತ್ಯದೊಂದಿಗೆ ಸಮಾಪ್ತಿಗೊಂಡಿತು.