ಪುತ್ತೂರು: ಬದ್ರಿಯಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸ ಬಳ್ಳಮಜಲು ಕುರಿಯ ಇದರ ಆಶ್ರಯದಲ್ಲಿ ಜಲಾಲಿಯಾ ರಾತೀಬ್ ಮತ್ತು ರಾಜ್ಯ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ತಂಡಗಳ ದಫ್ ಸ್ಪರ್ಧೆ ಡಿ.28ರಂದು ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ.
ಬಳ್ಳಮಜಲು ಕುರಿಯ ಬದ್ರಿಯಾ ಮಸೀದಿಯ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಯಹ್ಯಾ ತಂಙಳ್ ಪೋಳ್ಯ ದುವಾ ನೆರವೇರಿಸಲಿದ್ದು ಸ್ಥಳೀಯ ಅಧ್ಯಾಪಕರಾದ ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ ಉದ್ಘಾಟಿಸಲಿದ್ದಾರೆ.
ಬಳ್ಳಮಜಲು ಕುರಿಯ ಬದ್ರಿಯಾ ಮಸೀದಿಯ ಅಧ್ಯಕ್ಷ ರಫೀಕ್ ಕುರಿಯ ಅಧ್ಯಕ್ಷತೆ ವಹಿಸಲಿದ್ದು ಕೂರ್ನಡ್ಕ ಜುಮಾ ಮಸೀದಿ ಮುದರ್ರಿಸ್ ಉನೈಸ್ ಫೈಝಿ ವಳವೂರ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ. ಹಲವರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಗ್ರಿಬ್ ನಮಾಜಿನ ಬಳಿಕ ಅಸ್ಸಯ್ಯದ್ ಯಹ್ಯಾ ತಂಙಳ್ ಪೋಳ್ಯರವರ ನೇತೃತ್ವದಲ್ಲಿ ಜಲಾಲಿಯಾ ರಾತೀಬ್ ನಡೆಯಲಿದೆ.
ದಫ್ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ನಗದು ರೂ.2೦೦೦1 ಮತ್ತು ಟ್ರೋಫಿ, ದ್ವಿತೀಯ ರೂ.15೦೦1 ಮತ್ತು ಟ್ರೋಫಿ, ತೃತೀಯ ರೂ.1೦೦೦1 ಮತ್ತು ಟ್ರೋಫಿ ನೀಡಲಾಗುತ್ತದೆ. ಅಲ್ಲದೇ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.