ಪುತ್ತೂರು: ಜ 31, ಫೆ 1,2ರಂದು ತೆಂಕಿಲ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಲ್ಲಿ ನಡೆಯಲಿರುವ ಧರ್ಮ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಡಿ.25ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯ ಯಜಮಾನ ರಾಧಾಕೃಷ್ಣ ನಾಯ್ಕ್ , ಪುತ್ತೂರು ಮಹತೋಭಾರ ಶ್ರೀ ಮಹಲಿಂಗೇಶ್ವರ ದೇವವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ್ ಸುವರ್ಣ, ಈಶ್ವರ್ ಬೆಡೇಕರ್, ಮಹಾಬಲ ರೈ ಒಳತ್ತಡ್ಕ, ಹಾಗೂ ರತ್ನಾಕರ ನಾಯ್ಕ್ ಮುಕ್ರಂಪಾಡಿ, ಅನ್ವಿ ನಂದ ಕಿಶೋರ್ ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.
ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯ ಯಜಮಾನ ಹಾಗೂ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ಜ.31ರಂದು ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಹಾಗೂ ಅಚಾರ್ಯವರ್ಯರುಗಳಿಗೆ ಪೂರ್ಣಕುಂಬ ಸ್ವಾಗತ, ಬಳಿಕ ಗಣಪತಿ ಹೋಮ,ಶುದ್ದಿಕಲಶ, ಪಾನಕ ಪೂಜೆ, ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ 7 ಕ್ಕೆ ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಿಂದ ಭಂಡಾರ ತೆಗೆದು ಕಲ್ಲುರ್ಟಿ, ಕುಪ್ಪೆ ಪಂಜಿರ್ಲಿ, ಗುಳಿಗ ನೇಮ ನಡೆಯಲಿದೆ. ಫೆ. 1ರಂದು ಸಂಜೆ 7 ಕ್ಕೆ ಏಳ್ನಾಡುಗುತ್ತು ತರವಾಡು ಮನೆಯಿಂದ ಭಂಡಾರ ತೆಗೆದು ಪಿಲಿಚಾಮುಂಡಿ ಮತ್ತು ವರ್ಣರ ಪಂಜುರ್ಲಿ ದೈವದ ನೇಮ ನಡೆಯಲಿದೆ. ಫೆ.2ರಂದು ಕೊಟ್ಟಿಬೆಟ್ಟು ಏಳ್ನಾಡುಗುತ್ತು ತರವಾಡು ಮನೆಯಿಂದ ಸಂಜೆ 7 ಕ್ಕೆಧರ್ಮ ದೈವದ ಭಂಡಾರ ತೆಗೆದು ಧರ್ಮ ದೈವ ಜೂಮಾದಿ-ಬಂಟ ದೈವದ ನೇಮ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೈವ ದೇವರ ಅನುಗ್ರಹಕ್ಕೆ ಪಾತ್ರರಾಗಿ ಎಂದರು.