ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ

0

ಪುತ್ತೂರು: ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಯ ನಿರ್ದೇಶಕ ಸ್ಥಾನಗಳಿಗೆ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಒಟ್ಟು 11 ಸ್ಥಾನಗಳನ್ನು ಒಳಗೊಂಡಿರುವ ಸಹಕಾರ ಸಂಘದಲ್ಲಿ ಸಾಮಾನ್ಯ ಸ್ಥಾನದಿಂದ ಪಿ. ರಮೇಶ್ ಗೌಡ ಪಜಿಮಣ್ಣು, ಜಯಾನಂದ ಆಳ್ವ ಪಟ್ಟೆ, ಜಗದೀಶ್ ಎನ್.ಬನಾರಿ, ರಮೇಶ್ ಜಿ.ಗುತ್ತಿನಪಾಲು, ರಾಜೇಶ್ ಎ. ಅಂಬಟ, ಮಹಿಳಾ ಮೀಸಲು ಸ್ಥಾನದಿಂದ ಚೇತನಾ ಹಿಂದಾರು, ರೇವತಿ ಎಂ ಮಲಾರ್ ಹಾಗೂ ಪ.ಜಾತಿ ಪಂಗಡದಿಂದ ಅಂಗಾರ ಬದಿಯಡ್ಕ ಮತ್ತು ಪ.ಪಂಗಡ ಸ್ಥಾನದಿಂದ ಶಾರದಾ ಬಿ. ಬಂಡಿಕಾನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ‘ಎ’ ಮತ್ತು ‘ಬಿ’ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿದ್ದರೂ ಕೊನೆ ಕ್ಷಣದಲ್ಲಿ ಅವರೆಲ್ಲಾ ನಾಮಪತ್ರ ಹಿಂತೆಗೆದುಕೊಂಡಿದ್ದು ಆ ಎರಡು ಸ್ಥಾನಗಳು ಖಾಲಿಯಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್ ಚುನಾವಣಾಧಿಕಾರಿಯಾಗಿದ್ದರು.

LEAVE A REPLY

Please enter your comment!
Please enter your name here