ಪುತ್ತೂರು: ಡಿ.28ರಂದು ಬೆಳ್ಳಂಬೆಳಗ್ಗೆ ಕಾರೊಂದು ರಸ್ತೆ ಬದಿಯ ಪ್ರಪಾತಕ್ಕೆ ಬಿದ್ದು, ಕಾರಿನಲ್ಲಿದ್ದ ಸುಳ್ಯ ಜಟ್ಟಿಪಳ್ಳ ಮೂಲದ ಚಾಲಕ ಸಹಿತ ಮೂವರು ಮೃತಪಟ್ಟ ಘಟನೆ ಪುತ್ತೂರು ಬೈಪಾಸ್ ರಸ್ತೆ ಪರ್ಲಡ್ಕ ಸಮೀಪ ನಡೆದಿದೆ.
ಪುಣಚ ಗ್ರಾಮದ ದಂಬೆ ಅಪ್ಪುಮೂಲೆ ಎಂಬಲ್ಲಿ ಕುಟುಂಬದ ಗೋಂದೋಲು ಪೂಜೆ ಕಾರ್ಯಕ್ರಮಕ್ಕೆ ಹೋಗಿದ್ದ ಸುಳ್ಯದ ಜಟ್ಟಿಪಳ್ಳದ ಕುಟುಂಬವೊಂದು ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕೆ10 ಕಾರು ಪುತ್ತೂರು ಬೈಪಾಸ್ ರಸ್ತೆ ಪರ್ಲಡ್ಕದಲ್ಲಿ ರಸ್ತೆ ಬದಿಯ ಪ್ರಪಾತಕ್ಕೆ ಬಿದ್ದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಸುಳ್ಯ ಜಟ್ಟಿಪಲ್ಲ ನಿವಾಸಿ ಅಣ್ಣು ನಾಯ್ಕ ಯಾನೆ ಮೋಹನ್ ನಾಯ್ಕ(85ವ), ಅವರ ಪುತ್ರ ಚಾಲಕ ಚಿದಾನಂದ ನಾಯ್ಕ(58ವ), ಸ್ಥಳೀಯ ನಿವಾಸಿ ರಮೇಶ್ ನಾಯ್ಕ್ ಎಂಬವರು ಸಾವನ್ನಪ್ಪಿದ್ದಾರೆ.