ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜ.4 ಮತ್ತು 5ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ ‘ಕಿರುಷಷ್ಠಿ ಮಹೋತ್ಸವ’ಕ್ಕೆ ಡಿ.28ರಂದು ಗೊನೆ ಮುಹೂರ್ತ ನೆರವೇರಿತು.
ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಗೊನೆ ಕಡಿಯಲಾಯಿತು. ನಂತರ ಪೂರ್ವ ಸಂಪ್ರದಾಯದಂತೆ ಕ್ಷೇತ್ರದ ಮೂಲಸ್ಥಳವಾಗಿರುವ ಬಲ್ಲೇರಿಮಲೆಗೆ ತೆರಳಿ ಅಲ್ಲ್ಲಿ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಸಂದೀಪ್ ಕಾರಂತ, ದಾಮೋದರ ರೈ ತೊಟ್ಲ, ಪ್ರಜ್ವಲ್ ರೈ ತೊಟ್ಲ, ವೆಂಕಪ್ಪ ಗೌಡ ಕಾಣಿಕೆ, ಬಾಲಕೃಷ್ಣ ಗೌಡ ಕಾಣಿಕೆ, ಗಿರೀಶ್ ಕಿನ್ನಿಜಾಲು ಮತ್ತು ಅರ್ಚಕ ಸೂರ್ಯನಾರಾಯಣ ಭಟ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.