ಪುತ್ತೂರು: ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಹಿರಿಯ ವಿದ್ಯಾರ್ಥಿ ಸಂಘವನ್ನು ಡಿ.28ರಂದು ರಚನೆ ಮಾಡಲಾಯಿತು.
ಸಂಘದ ಅಧ್ಯಕ್ಷರಾಗಿ ಅನುಶ್ರೀ, ಕಾರ್ಯದರ್ಶಿಯಾಗಿ ಲಿಖಿತ್ ಕೆ ಮತ್ತು ಶಿಕ್ಷಕ ಪ್ರತಿನಿಧಿಯಾಗಿ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಎಂ ಇವರನ್ನು ನೇಮಕ ಮಾಡಲಾಯಿತು. ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಕಾರ್ಯಕ್ರಮ ಉದ್ಘಾಟಿಸಿ ಮಾರ್ಗದರ್ಶನ ನೀಡಿದರು. ಆಡಳಿತಾಧಿಕಾರಿ ಶುಭಾ ಅವಿನಾಶ್ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ವಿಶ್ವನಾಥ ಬಲ್ಯಾಯ, ಮುಖ್ಯ ಗುರುಗಳಾದ ದಿವ್ಯ ಮತ್ತು ಶ್ರೀ ಲಕ್ಷ್ಮೀ ಮೊಳೆಯಾರ್, ಶಿಕ್ಷಕಿ ಹರ್ಷಿಣಿ ಉಪಸ್ಥಿತರಿದ್ದರು. ಬಳಿಕ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ನಡೆಯಿತು.