ಸಾರ್ವಜನಿಕ ಪ್ರಯಾಣಿಕರೇ ಗಮನಿಸಿ..
ಪುತ್ತೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರು ಡಿ.31ರಿಂದ ಮುಷ್ಕರ ನಡೆಸಲು ಕರೆ ನೀಡಿದ್ದಾರೆ. ಅನಿರ್ದಿಷ್ಟಾವಧಿ ಸಾರಿಗೆ ಮುಷ್ಕರಕ್ಕೆ ಪುತ್ತೂರು ಕೆಎಸ್‌ಆರ್‌ಟಿಸಿ ಸ್ಟಾಫ್ & ವರ್ಕರ್ಸ್ ಯೂನಿಯನ್ ಕೈ ಜೋಡಿಸಿದೆ.
ಇಂದು(ಡಿ.29) ಪುತ್ತೂರಿನ ಲಕ್ಷ್ಮೀ ಹೋಟೆಲ್‌ನಲ್ಲಿ ಪುತ್ತೂರು ವಿಭಾಗದ ಜಂಟಿ ಸಮಿತಿಯ ಸದಸ್ಯರ ಸಭೆ ನಡೆದಿದ್ದು, ಸಭೆಯಲ್ಲಿ ಸ್ಟಾಫ್ & ವರ್ಕರ್ಸ್ ಯೂನಿಯನ್ ಪುತ್ತೂರು ವಿಭಾಗದ ಜಂಟಿ ಸಮಿತಿಯು ಬೆಂಬಲವನ್ನು ಘೋಷಿಸಿದೆ. ಈ ಹಿನ್ನಲೆಯಲ್ಲಿ ನಾಳೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಅನುಮಾನವಾಗಿದ್ದು, ಸಾರ್ವಜನಿಕ ಪ್ರಯಾಣಿಕರು ಗಮನಿಸಬೇಕಾಗಿದೆ..
ಸರ್ಕಾರದ ಮುಂದೆ ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆ
1) 01/01/2020ರ ವೇತನ ಪರಿಷ್ಕರಣೆಯ ಬಾಕಿ ಹಣವನ್ನು ಕೂಡಲೆ ಪಾವತಿಸಬೇಕು.
2)01/01/2024 ರಿಂದ ಹೊಸ ವೇತನ ಪರಿಷ್ಕರಣೆ ಮಾಡಿ ಬಾಕಿ ಹಣ ಮಂಜೂರು ಮಾಡಬೇಕು.
3) ನಿವೃತ್ತ ನೌಕರರಿಗೆ ನೀಡಬೇಕಾಗಿರುವ ಹಣವನ್ನು ಕೂಡಲೇ ಪಾವತಿಸಬೇಕು.
4)ಅವೈಜ್ಞಾನಿಕ ಪಾರಂ 4 ರದ್ದುಗೊಳಿಸಿ MTW ಕಾಯ್ದೆ ಹಾಗೂ ಕೈಗಾರಿಕಾ ಒಪ್ಪಂದ ದಂತೆ ಪಾರಂ 4 ಪರಿಷ್ಕರಿಸಬೇಕು.
5) ಹೊರ ಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಿ ಸಂಸ್ಥೆಯಿಂದಲೇ ನೇಮಕ ಮಾಡಬೇಕು.