ನಾಯಕರುಗಳ ಜಯಂತಿಗೆ, ನಿಧನಕ್ಕೆ ರಜೆ ಸಾರುವುದು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆಯೇ?. ಮಾರಕವಾಗುತ್ತದೆಯೇ? ಚರ್ಚೆಗೆ ಆಹ್ವಾನ

0

ನಾಯಕರ ಜಯಂತಿಗಳಿಗೆ ಮತ್ತು ನಿಧನಕ್ಕೆ ರಜೆ ಘೋಷಿಸಬಾರದೆಂದು ಹಲವಾರು ಬಾರಿ ಬರೆದಿದ್ದೇನೆ. ಮಾಜಿ ರಾಷ್ಟ್ರಪತಿ ಅಬ್ದುಲ್‌ಕಲಾಂ ತನ್ನ ನಿಧನಕ್ಕೆ ರಜೆ ಸಾರಬಾರದು, ಹೆಚ್ಚು ಕೆಲಸ ಮಾಡಬೇಕು ಎಂದು ತಿಳಿಸಿದ್ದರು. ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯ ಮಂತ್ರಿ ಎಸ್.ಎಂ.ಕೃಷ್ಣರ ನಿಧನಕ್ಕೆ ರಜೆ ಘೋಷಿಸಲಾಯಿತು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ನಿಧನಕ್ಕೆ ದೇಶದಾದ್ಯಂತ ರಜೆ ಘೋಷಿಸಲಾಗಿದೆ. ಅವರುಗಳ ಹೆಸರಿನಲ್ಲಿ ನೀಡುವ ಈ ರಜೆ ಜನಸಾಮಾನ್ಯರ ಬದುಕಿಗೆ, ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಅವರ ಮನಸ್ಸಿಗೆ ಹಿತ ತಂದೀತೆ – ಖಂಡಿತಾ ಇಲ್ಲ!. ರಾಜ್ಯ, ರಾಷ್ಟ್ರ ನಾಯಕರ ನಿಧನಕ್ಕೆ ಹೀಗೆ ರಜೆ ಘೋಷಿಸುತ್ತಾ ಹೋದರೆ ಜನತೆಯ, ರಾಜ್ಯದ ಮತ್ತು ದೇಶದ ಕಥೆ ಏನು?. ಈ ವಿಚಾರವಾಗಿ ಜನತೆ ಗಂಭೀರವಾಗಿ ಚಿಂತಿಸಬೇಕು, ಚರ್ಚಿಸಬೇಕು. ಆ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಮಾಡಬೇಕು. | ಡಾ.ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here