ನಿಡ್ಪಳ್ಳಿ: ಕ್ರಿಸ್ಮಸ್ ಬಂಧುತ್ವ ಆಚರಣಾ ಸಮಿತಿ ನಿಡ್ಪಳ್ಳಿ ಇದರ ವತಿಯಿಂದ ಕ್ರಿಸ್ಮಸ್ ಬಂಧುತ್ವ ಕಾರ್ಯಕ್ರಮ ಡಿ. 27 ರಂದು ಸಂಜೆ ಹೋಲಿ ರೋಜರಿ ಮಾತೆ ದೇವಾಲಯದ ವಠಾರದಲ್ಲಿ ನಡೆಯಿತು.
ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಎಲ್ಲಾ ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು.ಮುಖ್ಯ ಅತಿಥಿ ಕಾವು ಹೇಮನಾಥ ಶೆಟ್ಟಿ ಶುಭಾಶಂಸನೆ ಮಾಡಿದರು.ಮುಖ್ಯ ಅತಿಥಿ ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಆರಿಗ, ತಂಬುತ್ತಡ್ಕ ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಅಬೂ ಆಝ್ಮಿಯಾ ಫಾಝಿಲ್ ಹನೀಫಿ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಹಮ್ಮದ್ ಬಡಗನ್ನೂರು ಕ್ರಿಸ್ಮಸ್ ಹಬ್ಬದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಸ್ವಸ್ತಿ ಡಿ’ ಸೋಜಾ, ಕಾರ್ಯದರ್ಶಿ ಅಶೋಕ್ ಪೆಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮ;
ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಹಮ್ಮದ್ ಬಡಗನ್ನೂರು, ನಿಡ್ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಅವಿನಾಶ್ ರೈ ಕುಡ್ಚಿಲ, ಪಂಚಾಯತ್ ಸದಸ್ಯೆ ಗ್ರೇಟಾ ಡಿ’ ಸೋಜಾ, ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಹಿಲಾರಿ ಫೆರಾವೊ, ಸಮಾಜ ಸೇವಕ ಹಿಲಾರಿ ಮೊಂತೆರೊ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಶೋಕ್ ಪೆಡ್ಡಿ ಸ್ವಾಗತಿಸಿದರು. ಯೇಸು ಕ್ರಿಸ್ತನ ಜನ್ಮದ ಬಗ್ಗೆ ಬಬಿತ ಡಿ’ ಸೋಜಾ ಸಂದೇಶ ನೀಡಿದರು.ಸ್ವಸ್ತಿ ಡಿ’ ಸೋಜಾ ವಂದಿಸಿದರು. ಕಾಶ್ಮೀರ ಡಿ’ ಸೋಜಾ ಮತ್ತು ಜ್ಯೋತಿ ಮರಿಯಾ ಡಿ’ ಸೋಜಾ ಕಾರ್ಯಕ್ರಮ ನಿರೂಪಿಸಿದರು.
ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಇವರು ಅಭಿನಯಿಸಿದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನ ಗೊಂಡಿತು.ಕ್ರಿಸ್ಮಸ್ ಬಂಧುತ್ವ ಆಚರಣಾ ಸಮಿತಿ ಸದಸ್ಯರು, ಚರ್ಚ್ ಪಾಲನಾ ಸಮಿತಿ ಸದಸ್ಯರು ಸಹಕರಿಸಿದರು.ಎಲ್ಲಾ ಸಮಾಜದ ಬಂಧು ಬಾಂದವರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡರು.