ಪುತ್ತೂರು:’ಉತ್ತಮ ಸೇವೆಯೊಂದಿಗೆ ನಮ್ಮೊಂದಿಗೆ ಬೆಳೆಯಿರಿ’ ಎಂಬ ಧ್ಯೇಯವಾಕ್ಯದೊಂದಿಗೆ ಇಲ್ಲಿನ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಡಿ.23 ರಂದು ಅಧ್ಯಕ್ಷ ಲಿಯೋ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ಕ್ರಿಸ್ಮಸ್ ಹಬ್ಬಾಚರಣೆ ಸೊಸೈಟಿಯಲ್ಲಿ ಜರಗಿತು.
ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಲಿಯೋ ಡಿ’ಸೋಜರವರು, ಕ್ರಿಸ್ಮಸ್ ಹಬ್ಬವು ಕ್ರೈಸ್ತರ ಪ್ರಮುಖ ಹಬ್ಬವಾಗಿದ್ದು, ಪ್ರಭು ಯೇಸುಕ್ರಿಸ್ತರು ಜನರ ಪಾಪ ಪರಿಹಾರಗೋಸ್ಕರ ಲೋಕೋದ್ಧಾರಕನಾಗಿ ಭುವಿಗೆ ಬಂದಿರುವುದಾಗಿದೆ. ಅದೇ ರೀತಿ ಕ್ರಿಸ್ಮಸ್ ಆಚರಣೆಯ ಈ ಸಂದರ್ಭದಲ್ಲಿ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಎರಡು ಫಲಾನುಭವಿ ಕುಟುಂಬಗಳನ್ನು ಗುರುತಿಸಿ ಅವರಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಿರುವುದು ಪ್ರಸಂಶನೀಯ ಎಂದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ ಮಾತನಾಡಿ, ಅಭ್ಯುದಯ ಸೊಸೈಟಿಯು ಕೇವಲ ಡೆಫಾಸಿಟ್ ಸಂಗ್ರಹ ಹಾಗೂ ಸಾಲಗಳನ್ನು ನೀಡುವುದಲ್ಲದೆ ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು, ಗ್ರಾಹಕರು ಹಾಗೂ ಹಿತೈಷಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಸೊಸೈಟಿಯು ಕೆಲವೊಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ಕ್ರಿಸ್ಮಸ್ ಸಂದೇಶವನ್ನು ಸಾರುವ ಕ್ರಿಸ್ಮಸ್ ಕ್ಯಾರಲ್ಸ್ ಸಂಸ್ಥೆಯ ಸಿಬ್ಬಂದಿಗಳು ಹಾಡಿದರು. ಕೊನೆಗೆ ಭೋಜನದ ವ್ಯವಸ್ಥೆಯೊಂದಿಗೆ ಕುಸ್ವಾರ್ ಅನ್ನು ಹಂಚಲಾಯಿತು.
2 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ವಿತರಣೆ…
ಈ ಸಂದರ್ಭದಲ್ಲಿ ಪುತ್ತೂರಿನ ಕೆರೆಮೂಲೆ ಎಂಬಲ್ಲಿನ ಈರ್ವರು ಫಲಾನುಭವಿ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗೆ ದಿನಸಿ ಸಾಮಾಗ್ರಿಗಳನ್ನು ಹಾಗೂ ಕುಸ್ವಾರ್ ಅನ್ನು ವಿತರಿಸಲಾಯಿತು.