ಪುತ್ತೂರು: ಕೆಮ್ಮಿಂಜೆ ನೆಕ್ರಾಜೆಯ ಎಲ್ಯಣ್ಣ ಗೌಡ ಎಂ ಅವರ ಪತ್ನಿ ನಿವೃತ್ತ ಉಪತಹಸೀಲ್ದಾರ್ ಯಶೋಧ ಕೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಡಿ.30ರಂದು ಕೆಮ್ಮಿಂಜೆ ಶ್ರೀ ವಿಷ್ಣುಮೂರ್ತಿ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಷಣ್ಮುಖ ಸಭಾ ಭವನದಲ್ಲಿ ನಡೆಯಿತು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ನುಡಿನಮನ ಸಲ್ಲಿಸಿ ಮಾತನಾಡಿ, ಸರಕಾರಿ ಸೇವೆಯಲ್ಲಿ ವಿವಿಧ ಹುದ್ದೆಗಳ್ನು ಅಲಂಕರಿಸಿದ ಯಶೋಧ ಅವರು ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಯನ್ನು ಗಳಿಸಿದ್ದಾರೆ. ಅವರ ಅತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದರು.
ಈ ಸಂದರ್ಭ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಯಶೋಧ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಬಳಿಕ ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಯಶೋಧ ಅವರ ಪತಿ ಎಲ್ಯಣ್ಣ ಗೌಡ ಎಲ್ಲರನ್ನು ಬರ ಮಾಡಿಕೊಂಡರು. ಸಂಬಂಧಿಕ ಕೃಷ್ಣೇಗೌಡ, ಪುತ್ರರಾದ ಸತೀಶ್ ಕುಮಾರ್, ಹರೀಶ್ ಕುಮಾರ್, ಸೊಸೆ ಜಲಜ ಸತೀಶ್ ನೆಕ್ರಾಜೆ ಕುಟುಂಬಸ್ಥರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ಮಾಜಿ ಅಧ್ಯಕ್ಷರಾದ ವಿಶ್ವನಾಥ ಗೌಡ, ನಾಗಪ್ಪ ಗೌಡ ಬೊಮ್ಮೆಟ್ಟಿ, ಸಂಘದ ಪದಾಧಿಕಾರಿಗಳಾದ ಸುಂದರ ಗೌಡ ನಡುಬೈಲು, ಲಿಂಗಪ್ಪ ಗೌಡ, ಪುರುಷೋತ್ತ ಗೌಡ ಮುಂಗ್ಲಿಮನೆ, ಯುವರಾಜ್, ಮಾದವ ಪೆರಿಯತ್ತೋಡಿ, ಸುರೇಶ್ ಗೌಡ ಕಲ್ಲಾರೆ, ದಾಮೋದರ್ ಗೌಡ ನಂದಿಲ, ಪರಿವಾರ ಸೊಸೈಟಿ ಅಧ್ಯಕ್ಷ ಸಂತೋಷ್ ಕುಮಾರ್ ಮತ್ತು ನಿರ್ದೇಶಕರು, ಸ್ವಾಭಿಮಾನಿ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಕಲ್ಲೇಗ, ಹಿರಿಯರಾದ ಕಿಟ್ಟಣ್ಣ ಗೌಡ, ಯತೀಂದ್ರ, ಸುರೇಶ್ ಶೆಟ್ಟಿ, ಮೋಹನ್ ರೈ ನರಿಮೊಗರು, ಲೋಕಪ್ಪ ಗೌಡ ಸಹಿತ ಹಲವಾರು ಮಂದಿ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.